ಹಿಜಾಬ್ ವಿವಾದಕ್ಕೆ ಮಲಾಲಾ ಯೂಸುಫ್ ಪ್ರತಿಕ್ರಿಯೆ: ಇದು ನಿಜಕ್ಕೂ ಭಯಾನಕ ಎಂದು ಟ್ವೀಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೆಣ್ಣು ಮಕ್ಕಳ ಶಿಕ್ಷಣ ಹೋರಾಟಗಾರ್ತಿ, ನೊಬೆಲ್ ಪ್ರಶಸ್ತಿ ಪುರಸ್ಕೃತೆ ಪಾಕಿಸ್ತಾನ ಮೂಲದ ಮಲಾಲಾ ಯೂಸುಫ್ ಝಾಯಿ ಕರ್ನಾಟಕದ ಹಿಜಾಬ್ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಈ ಬಗ್ಗೆ ಮಲಾಲಾ ಟ್ವೀಟ್ ಮಾಡಿದ್ದು, ಹಿಜಾಬ್ ಅಥವಾ ಶಿಕ್ಷಣ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವಂತೆ ಕಾಲೇಜುಗಳು ಬಲವಂತ ಮಾಡುತ್ತಿವೆ. ಹಿಜಾಬ್ ಧರಿಸಿದ್ದಾರೆ ಎನ್ನುವ ಕಾರಣಕ್ಕೆ ವಿದ್ಯಾರ್ಥಿನಿಯರನ್ನು ಕಾಲೇಜಿನಿಂದ ಹೊರಗಿಟ್ಟಿದ್ದು ನಿಜಕ್ಕೂ ಭಯನಾಕ.

ಹುಡುಗಿಯರು ಹೆಚ್ಚು ಅಥವಾ ಕಡಿಮೆ ಬಟ್ಟೆ ಧರಿಸುವುದಕ್ಕೆ ಆಕ್ಷೇಪಣೆ ಮಾಡುತ್ತಿರುವುದು ಇದೇ ಮೊದಲೇನಲ್ಲ. ಆದರೆ ಹಿಜಾಬ್ ಧರಿಸುವ ಕಾರಣಕ್ಕೆ ಮುಸ್ಲಿಂ ಹುಡುಗಿಯರನ್ನು ತುಚ್ಛವಾಗಿ ಕಾಣಬಾರದು. ಇದನ್ನು ಕೂಡಲೇ ನಾಯಕರು ನಿಲ್ಲಿಸಬೇಕು ಎಂದಿದ್ದಾರೆ.
ರಾಜ್ಯದಲ್ಲಿ ಹಿಜಾಬ್ ವಿವಾದ ಕೈಮೀರಿದ್ದು, ವಿದ್ಯಾರ್ಥಿಗಳು ಅತಿರೇಕತದ ವರ್ತನೆ ತೋರುತ್ತಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಮೂರು ದಿನ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!