ಮೇಘಾಲಯ: ಕಾಂಗ್ರೆಸ್‌ ತೊರೆದ ಎಲ್ಲಾ 5 ಶಾಸಕರು, ಬಿಜೆಪಿ ಸೇರ್ಪಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಚುನಾವಣೆಗೆ ಸಜ್ಜಾಗುತ್ತಿರುವ ಹೊತ್ತಿನಲ್ಲಿ ಕಾಂಗ್ರೆಸ್‌ ಗೆ ಭಾರೀ ಹೊಡೆತ ಬಿದಂತ್ತಾಗಿದೆ. ಮೇಘಾಲಯ ಕಾಂಗ್ರೆಸ್‌ ನ ಎಲ್ಲಾ 5 ಶಾಸಕರು ಬಿಜೆಪಿ ಬೆಂಬಲಿತ ಎಂಡಿಎಗೆ ಸೇರ್ಪಡೆಯಾಗಿದ್ದಾರೆ.
ಈ ಮೂಲಕ ಕಾಂಗ್ರೆಸ್‌ ತನ್ನ ವಿಪಕ್ಷ ಸ್ಥಾನವನ್ನು ಕಳೆದುಕೊಂಡಿದೆ. 17 ಶಾಸಕರನ್ನು ಹೊಂದಿದ್ದ ಕಾಂಗ್ರೆಸ್‌ ಇಷ್ಟು ತಿಂಗಳು ವಿಪಕ್ಷ ಸ್ಥಾನದಲ್ಲಿತ್ತು, ಆದರೆ ಈಗ ಟಿಎಂಸಿ ವಿಪಕ್ಷ ಸ್ಥಾನ ಪಡೆದುಕೊಂಡಿದೆ.
ಕಳೆದ ವರ್ಷ ಕಾಂಗ್ರೆಸ್‌ ಗೆ ಮಾಜಿ ಸಿಎಂ ಮುಕುಲ್‌ ಸಂಗ್ಮಾ ಸೇರಿ 12 ಶಾಸಕರು ಟಿಎಂಸಿಗೆ ಸೇರ್ಪಡೆಯಾಗುವ ಮೂಲಕ ಶಾಕ್‌ ನೀಡಿದ್ದರು. ಈಗ ಉಳಿದ 5 ಶಾಸಕರು ಬಿಜೆಪಿಗೆ ಸೇರಿರುವುದು ಆಘಾತ ತಂದಿದೆ.
ಎಂ. ಅಂಪಾರೀನ್‌ ಲಿಂಗ್ಡೋಹ್‌, ಪಿ.ಟಿ. ಸಾಕ್ಮಿ, ಮೈರಾಲ್ಬಾರ್ನ್‌ ಸೈಯೆಮ್‌, ಕಿಮ್ಫಾ ಎಸ್‌ ಮಾರ್ಬಾನಿಯಾಂಗ್‌ ಮತ್ತು ಮೊಹೆಂದ್ರೋ ರಾಪ್ಸಾಂಗ್‌ ಕಾಂಗ್ರೆಸ್‌ ತೊರೆದ ಶಾಸಕರು.
ಮುಖ್ಯಮಂತ್ರಿ ಕಾನ್ರಾಡ್‌ ಕೆ. ಸಂಗ್ಮಾ ಅವರನ್ನು ಈ 5 ಶಾಸಕರು ಭೇಟಿಯಾಗಿ ಸಮ್ಮಿಶ್ರ ಸರ್ಕಾರಕ್ಕೆ ಸೇರ್ಪಡೆಯಾಗುತ್ತಿರುವ ಬಗ್ಗೆ ಪತ್ರ ಸಲ್ಲಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!