ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲುಗು ಇಂಡಸ್ಟ್ರಿ ಹಿಟ್ ಜೋಡಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಡೇಟಿಂಗ್‌ನಲ್ಲಿದ್ದಾರೆ ಅನ್ನೋ ಗುಸುಗುಸು ಟಾಲಿವುಡ್‌ನಲ್ಲಿ ಜೋರಾಗಿಯೇ ಇದೆ.
ವಿಜಯ್ ಹಾಗೂ ರಶ್ಮಿಕಾ ಆಗಾಗ ಒಟ್ಟಿಗೇ ಕಾಣಿಸಿಕೊಂಡರೂ ನಾವಿಬ್ಬರೂ ಫ್ರೆಂಡ್ಸ್ ಅಂತಷ್ಟೇ ಹೇಳಿಕೊಂಡಿದ್ದಾರೆ. ಇದೀಗ ಮೊದಲ ಬಾರಿಗೆ ಗೀತಾ ಗೋವಿಂದಂಗಾಗಿ ವಿಜಯ್ ಮೀಟ್ ಮಾಡಿದಾಗ ಹೇಗನಿಸಿತ್ತು ಎಂದು ರಶ್ಮಿಕಾ ಹೇಳಿಕೊಂಡಿದ್ದಾರೆ.
ಮೊದಲ ಬಾರಿಗೆ ವಿಜಯ್ ನೋಡಿದಾಗ ಹೆಚ್ಚೇ ಭಯವಾಗಿತ್ತು. ಹೊಸಬರನ್ನು ಪರಿಚಯ ಮಾಡಿಕೊಳ್ಳೋಕೆ, ಸ್ನೇಹ ಬೆಳೆಸೋಕೆ ನನಗೆ ಭಯ. ಆದರೆ ವಿಜಯ್ ಉತ್ತಮ ಸ್ನೇಹಿತ. ಅವರನ್ನು ಅರ್ಥ ಮಾಡಿಕೊಳ್ಳೋದಕ್ಕೆ ಹೆಚ್ಚು ಎಫರ್ಟ್ಸ್ ಬೇಕಿಲ್ಲ. ಈಸಿಯಾಗಿ ಬ್ಲೆಂಡ್ ಆಗುತ್ತಾರೆ ಎಂದು ರಶ್ಮಿಕಾ ಹೇಳಿದ್ದಾರೆ.