ಸಾಮಾಗ್ರಿಗಳು
ಒಂದು ಕಪ್ ಅಕ್ಕಿ
ಕಾಲು ಕಪ್ ಉದ್ದಿನಬೇಳೆ
ಒಂದು ಹಿಡಿ ಮೆಂತ್ಯೆ
ಒಂದು ಹಿಡಿ ಕಡ್ಲೆಬೇಳೆ
ಒಂದು ಹಿಡಿ ಬಾರ್ಲಿ
ಒಂದು ಹಿಡಿ ಹೆಸರುಬೇಳೆ
ಒಂದು ಹಿಡಿ ತೊಗರಿಬೇಳೆ
ಸೋಡಾ ಪುಡಿ
ಉಪ್ಪು
ಅನ್ನ ಅಥವಾ ಅವಲಕ್ಕಿ
ಮಾಡುವ ವಿಧಾನ
ಬೆಳಗ್ಗೆ ಇದಿಷ್ಟು ಪದಾರ್ಥಗಳನ್ನು ತೊಳೆದು ನೀರಿನಲ್ಲಿ ನೆನೆಸಿ
ಸಂಜೆ ವೇಳೆಗೆ ಸ್ವಲ್ಪ ಅನ್ನ ಅಥವಾ ಅವಲಕ್ಕಿ ಬೆರೆಸಿ ರುಬ್ಬಿ
ರುಬ್ಬಿದ ನಂತರ ಚಿಟಿಕೆ ಸೋಡಾಪುಡಿ, ಉಪ್ಪು ಹಾಕಿ ಕಲಸಿ
ಮರುದಿನ ಬೆಳಗ್ಗೆ ದಪ್ಪಗೆ ದೋಸೆ ಹಾಕಿದರೆ ಸೆಟ್ ದೋಸೆ ರೆಡಿ