ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ನ ಕ್ಯೂಟ್ ಕಪಲ್ ಆಲಿಯಾ ಭಟ್ ಹಾಗೂ ರಣ್ವೀರ್ ಸಿಂಗ್ ಇನ್ನೇನು ಸದ್ಯದರಲ್ಲೇ ಮದುವೆ ಆಗುತ್ತಾರೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಆದರೆ ಇದೀಗ ಆಲಿಯಾ ರಣ್ಬೀರ್ ನಾವು ಈಗಲೇ ಮದುವೆ ಆಗೋದಿಲ್ಲ ಎಂದು ಹೇಳಿದ್ದಾರೆ. ಯಾವುದೇ ಸಂದರ್ಶನದಲ್ಲಿಯೂ ಡೇಟಿಂಗ್ ವಿಷಯ ಮುಚ್ಚಿಡದ ಜೋಡಿ, ಮದುವೆ ಬಗ್ಗೆ ಮಾತ್ರ ಸಿಕ್ಕಾಪಟ್ಟೆ ಸಸ್ಪೆನ್ಸ್ ಮೇಂಟೇನ್ ಮಾಡುತ್ತಿದ್ದಾರೆ.
ನಾವಿಬ್ಬರೂ ಲವ್ ಮಾಡುತ್ತಿರೋದು ನಿಜ ಬಟ್ ಈಗಲೇ ಮದುವೆ ಅಂತೂ ಆಗೋದಿಲ್ಲ ಎಂದು ಆಲಿಯಾ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಕಪಲ್ ಎಂದಮೇಲೆ ಮದುವೆ ಯಾವಾಗ ಅನ್ನೋದು ಸಹಜ ಬಟ್ ನಾವು ನಮ್ಮ ಟೈಮ್ ತೆಗೆದುಕೊಳ್ಳಲು ಇಷ್ಟಪಡುತ್ತೇವೆ ಎಂದು ಆಲಿಯಾ ಹೇಳಿಕೊಂಡಿದ್ದಾರೆ.