ಹೊಸದಿಗಂತ ವರದಿ, ಹುಬ್ಬಳ್ಳಿ:
ರಾಜಕೀಯ ಬಳಕೆಗೆ ಕಾಂಗ್ರೆಸ್ ಪಾದಯಾತ್ರೆ ಮಾಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ಯ ಹರಿಹಾಯ್ದಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ನೀರಾವರಿ ಯೋಜನೆ ಕುರಿತು ಗೆಜೆಟ್ ನೋಟಿಫಿಕೇಶನ್ ಆಗಿತ್ತು. ಆದರೂ ಸಹಿತ ಅವರ ಕಾಲದಲ್ಲಿ ಏನೂ ಮಾಡದೇ ಇವಾಗ ಒಮ್ಮೇಲೆ ನೀರಾವರಿ ಯೋಜನೆಗಳು ನೆನಪಿಗೆ ಬಂದಿದೆ. ಇದು ಎಷ್ಟರಮಟ್ಟಿಗೆ ಸರಿ ಎಂಬುದನ್ನು ಕಾಂಗ್ರೆಸ್ ಅರಿತುಕೊಳಲ್ಲಿ ಎಂದರು.
ಈ ಹಿಂದೆ 2013 ರಲ್ಲಿ ಕಾಂಗ್ರೆಸ್ ನಡೆಗೆ ಕೃಷ್ಣಯ ಕಡೆಗೆ ಎಂದು ಮಾಡಿದರು. ಆಗ ಯೋಜನೆ ಅನುಷ್ಟಾನಕ್ಕೆ ಕೋಟ್ಯಾಂತರ ರೂಪಾಯಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿ, ಯಾವುದು ಕಾಮಗಾರಿ ಮಾಡದೆ ಈ ಭಾಗದ ಜನರಿಗೆ ಅನ್ಯಾಯ ಮಾಡಿದ್ದಾರೆ. ಇದನ್ನು ಜನರು ಮರೆತ್ತಿಲ್ಲ. ಹಾಗಾಗಿ ಇಲ್ಲಿ ಮತ್ತೊಮ್ಮೆ ಜನರಿಗೆ ಏನೂ ಹೇಳಲು ಆಗೋದಿಲ್ಲ ಎಂದು ಕೇವಲ ರಾಜಕೀಯ ಲಾಭಕ್ಕಾಗಿ ಮೇಕೆದಾಟು ಪಾದಯಾತ್ರೆ ಹಿಡಿದುಕೊಂಡಿದ್ದಾರೆ ಎಂದು ಹೇಳಿದರು.
ನಾನು ಧಾರವಾಡ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ವಹಿಸಿಕೊಂಡ ನಂತರ ಜನವರಿ 26 ಕ್ಕೆ ಬಂದು ಧ್ವಜಾರೋಹಣ ನೆರವೇರಿಸಿ, ಅಧಿವೇಶನದಲ್ಲಿ ಭಾಗವಹಿಸಿದ್ದೆ. ನಂತರ ಒಂದು ದಿನ ಜಿಲ್ಲೆಯ ಪ್ರವಾಸ ಮಾಡಿದ್ದೆ. ಆದಾದ ನಂತರ ಇದೀಗ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳ ಚಾಲನೆಗೆ ಬಂದಿದ್ದೇನೆ. ನಾನು ಆಗಾಗ ಬಂದು ಹೋಗತ್ತಾ ಇರತ್ತೇನೆ ಆದರೆ ಮಾಧ್ಯಮದವರಿಗೆ ಮಾತ್ರ ಗೊತ್ತು ಆಗುವುದಿಲ್ಲ ಎಂದು ಇದೇ ವೇಳೆ ತಿಳಿಸಿದರು.