ಹೊಸದಿಗಂತ ಡಿಜಿಟಲ್ ಡೆಸ್ಕ್:
ಯೂರೋಪಿನ ಅತಿ ದೊಡ್ಡ ನ್ಯೂಕ್ಲಿಯರ್ ವಿದ್ಯುತ್ ಸ್ಥಾವರ ಘಟಕದ ಮೇಲೆ ರಷ್ಯಾ ಶೆಲ್ ದಾಳಿ ನಡೆಸಿ ಧ್ವಂಸಗೊಳಿಸಿದೆ.
ರಷ್ಯಾದ ಈ ವರ್ತನೆಯನ್ನು ಖಂಡಿಸಿದ ಉಕ್ರೇನ್ ಅಧ್ಯಕ್ಷ ವೊಲೊಡಿಮೀರ್ ಝೆಲೆನ್ಸ್ಕಿ ವಿಡಿಯೊ ಪ್ರಕಟಣೆ ನೀಡಿದ್ದು, ಇದು ರಷ್ಯಾದ ಪರಮಾಣು ಭಯೋತ್ಪಾದನೆ ಎಂದು ಗುಡುಗಿದ್ದಾರೆ.
ರಷ್ಯಾ ಹೊರತುಪಡಿಸಿ ಬೇರೆ ಯಾವುದೇ ದೇಶಗಳು ಪರಮಾಣು ವಿದ್ಯುತ್ ಘಟಕಗಳ ಮೇಲೆ ಗುಂಡಿನ ದಾಳಿ ನಡೆಸಿಲ್ಲ. ಮನುಕುಲದ ಇತಿಹಾಸದಲ್ಲಿಯೇ ಇದು ಮೊದಲ ಬಾರಿಗೆ ನಡೆದಿದೆ. ಭಯೋತ್ಪಾದಕ ರಾಷ್ಟ್ರವು ಈಗ ಪರಮಾಣು ಭಯೋತ್ಪಾದನೆ ನಡೆಸುತ್ತಿದೆ ಎಂದು ಝೆಲೆನ್ಸ್ಕಿ ಅಕ್ರೋಶ ಹೊರಹಾಕಿದ್ದಾರೆ.
ಇದು ಝಪೊರಿಜಿಯಾದಲ್ಲಿರುವ ವಿದ್ಯುತ್ ಸ್ಥಾವರವಾಗಿದ್ದು, ಇದರಿಂದ ದೇಶದ ಶೇ.40ರಷ್ಟು ವಿದ್ಯುತ್ ಶಕ್ತಿ ಪೂರೈಕೆಯಾಗುತ್ತಿತ್ತು.