Saturday, April 1, 2023

Latest Posts

ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ನೆರವಿಗೆ ಧಾವಿಸಿದ ಸೋನು ಸೂದ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೋವಿಡ್ ಕಷ್ಟಕಾಲದಲ್ಲಿ ಜನರಿಗೆ ಸಹಾಯಹಸ್ತ ಚಾಚಿದ್ದ ಬಾಲಿವುಡ್ ನಟ ಸೋನು ಸೂದ್ ಇದೀಗ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ನೆರವಿಗೆ ಧಾವಿಸಿದ್ದಾರೆ.

ಸೋನು ಸೂದ್ ಚಾರಿಟಿ ಫೌಂಡೇಶನ್ ಉಕ್ರೇನ್‌ನಲ್ಲಿ ಇರುವ ಭಾರತೀಯರ ನೆರವಿಗೆ ಧಾವಿಸಿದೆ. ಸಂಕಷ್ಟದಲ್ಲಿ ಸಿಲುಕಿರುವ ಭಾರತೀಯರಿಗೆ ಸೋನು ಸೂದ್ ತಂಡ ಅಗತ್ಯ ಮಾರ್ಗದರ್ಶನ ನೀಡಿದೆ. ಆಹಾರ ಹಾಗೂ ನೀರಿನ ವ್ಯವಸ್ಥರ ಮಾಡಿದೆ. ವಿದ್ಯಾರ್ಥಿಗಳ ಜತೆ ಸೋನು ಸೂದ್ ತಂಡ ನಿರಂತರ ಸಂಪರ್ಕದಲ್ಲಿದ್ದು, ಸುರಕ್ಷಿತವಾಗಿ ಗಡಿ ತಲುಪಿಸುವ ಕೆಲಸ ಮಾಡಿದೆ.

ಸೋನು ಸೂದ್‌ರಿಂದ ಸಹಾಯ ಪಡೆದು ತಾಯ್ನಾಡಿಗೆ ಮರಳಿದ ಭಾರತೀಯರು ವಿಡಿಯೋ ಮೂಲಕ ಸೋನುಗೆ ಧನ್ಯವಾದ ಹೇಳಿದ್ದಾರೆ. ಸೋನು ಕೂಡ ಇದಕ್ಕೆ ಉತ್ತರಿಸಿದ್ದು ಇದು ನನ್ನ ಕರ್ತವ್ಯ, ನಿಮಗೆ ನನ್ನಿಂದ ಸ್ವಲ್ಪ ಸಹಾಯ ಆಯಿತು ಎಂದು ನನಗೆ ಖುಷಿಯಿದೆ. ಭಾರತ ಸರ್ಕಾರ ಈ ಎಲ್ಲ ಕಾರ್ಯಗಳಿಗೂ ನೆರವು ನೀಡಿದೆ ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!