ಹೊಸದಿಗಂತ ಡಿಜಿಟಲ್ ಡೆಸ್ಕ್:
ರಷ್ಯಾ ಆಕ್ರಮಣದಿಂದ ಉಕ್ರೇನ್ನಲ್ಲಿ ಭೀಕರ ಪರಿಸ್ಥಿತಿ ಎದುರಾಗಿದೆ. ಇಲ್ಲಿಂದ ಬದುಕಿ ಬಂದರೆ ಪುನರ್ಜನ್ಮವೇ ಸರಿ ಎಂದು ನಾಗರಿಕರು ಹೇಳುತ್ತಿದ್ದಾರೆ. ಯುದ್ಧಭೂಮಿ ಉಕ್ರೇನ್ ತೊರೆದು ಬಂದ ಉಕ್ರೇನ್ನ ಮಾಜಿ ಮಿಸ್ ಉಕ್ರೇನ್ ವೆರೊನಿಕಾ ದಿಡುಸೆಂಕೊ ಅಲ್ಲಿನ ಭೀಕರ ಪರಿಸ್ಥಿತಿಯನ್ನು ವಿವರಿಸಿದ್ದಾರೆ.
ದಾಳಿಯ ಮೊದಲ ದಿನ ಸ್ಫೋಟ ಹಾಗೂ ಸೈರನ್ ಸದ್ದಿಗೆ ಗಾಬರಿಯಾಗಿ ಎದ್ದು ನೋಡಿದೆವು. ನನ್ನಂತೆಯೇ ಎಲ್ಲರೂ ಹೆದರಿದ್ದರು. ಮನೆ ಬಿಟ್ಟು ಎಲ್ಲರೂ ಹೊರಸೇರಿದೆವು. ಇದು ಯುದ್ಧ ಎಂದು ತಿಳಿದುಕೊಳ್ಳಲು ಹೆಚ್ಚು ಸಮಯ ಬೇಕಾಗಿರಲಿಲ್ಲ. ಏಳು ವರ್ಷದ ಮಗನ ಜೊತೆ ಕೈಯಲ್ಲಿ ಜೀವ ಹಿಡಿದುಕೊಂಡು ಗಡಿ ತಲುಪಿದೆ.
ಅಲ್ಲಿಂದ ವೀಸಾ ಸಮಸ್ಯೆಯಾಗಿ ಮಗನನ್ನು ಜಿನಿವಾದಲ್ಲೇ ಬಿಟ್ಟು ಅಮೆರಿಕಾಗೆ ತೆರಳಿದೆ. ಮಗನ ವೀಸಾಗೆ ಅನುಮತಿ ಕೋರಿದ್ದೆ ಆದರೆ ಅರ್ಜಿ ತಿರಸ್ಕೃತಗೊಂಡಿದೆ. ಇದೀಗ ಮಗನಿಗಾಗಿ ಮತ್ತೆ ಜಿನಿವಾಗೆ ಹೋಗುತ್ತೇನೆ.
ನಾನು ತಪ್ಪಿಸಿಕೊಂಡು ಹೊರಬಂದೆ. ಆದರೆ ಎಲ್ಲರಿಗೂ ಇದನ್ನು ಮಾಡಲು ಆಗಿಲ್ಲ. ಈಗಲು ಎಷ್ಟೋ ತಾಯಂದಿರು, ಮಕ್ಕಳು ಅನ್ನ ನೀರು ಇಲ್ಲದೆ ಮೆಟ್ರೋ ಸುರಂಗ ಮಾರ್ಗಗಳಲ್ಲಿ ಕುಳಿತಿದ್ದಾರೆ. ಪ್ರತಿ ಬಾಂಬ್ ಸ್ಫೋಟದ ಸದ್ದಿಗೂ ನಡುಗುತ್ತಿದ್ದಾರೆ. ಆಶ್ರಯ ತಾಣಗಳಲ್ಲೇ ಮಕ್ಕಳಿಗೆ ಜನ್ಮ ನೀಡುತ್ತಿದ್ದಾರೆ ಇದೆಲ್ಲವೂ ಹೃದಯ ವಿದ್ರಾವಕ ಎಂದಿದ್ದಾರೆ.