ಈ ವರ್ಷ ಭಾರತದಲ್ಲಿ ನಡೆಯಲಿದೆ ಚೆಸ್ ಒಲಿಂಪಿಯಾಡ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಈ ವರ್ಷದ ಚೆಸ್ ಒಲಿಂಪಿಯಾಡ್ ಭಾರತದಲ್ಲಿ ನಡೆಯಲಿದೆ. ಜುಲೈ- ಆಗಸ್ಟ್‌ನಲ್ಲಿ ಚೆಸ್ ಒಲಿಂಪಿಯಾಡ್ ನಡೆಯಲಿದ್ದು, ಚೆನ್ನೈ ಇದರ ಆತಿಥೇಯತ್ವ ವಹಿಸಲಿದೆ.
ರಷ್ಯಾದಲ್ಲಿ ನಡೆಯಬೇಕಾಗಿದ್ದ ಒಲಿಂಪಿಯಾಡ್‌ನ್ನು ಉಕ್ರೇನ್ ಮೇಲೆ ಸಮರ ಸಾರಿದ ಕಾರಣಕ್ಕಾಗಿ ಬೇರೆಡೆಗೆ ಸ್ಥಳಾಂತರಿಸಲು ಫಿಡೆ ನಿರ್ಧರಿಸಿದ ಕಾರಣ, ಭಾರತವು ಆತಿಥೇಯತ್ವ ವಹಿಸಲು ಮುಂದೆ ಬಂದಿತ್ತು. ಬೇರೆ ದೇಶಗಳೂ ಇದಕ್ಕೆ ಬಿಡ್ ಸಲ್ಲಿಸಿದ್ದರಿಂದ ಯಾರಿಗೆ ದೊರಕುವುದೆಂಬ ಕುತೂಹಲ ಮೂಡಿತ್ತು. ಇದೀಗ ಭಾರತಕ್ಕೇ ಆತಿಥೇಯತ್ವ ದೊರಕಿರುವುದು ಚೆಸ್ ಪ್ರಿಯರಿಗೆ ಸಂಭ್ರಮ ಮೂಡಿಸಿದೆ.
ಚೆಸ್ ಒಲಿಂಪಿಯಾಡ್ ನಡೆಸಲು ತಮಿಳ್ನಾಡು ಸರಕಾರವು 75 ಕೋಟಿ ರೂ. ಒದಗಿಸುವ ಭರವಸೆ ನೀಡಿದೆ.
ಭಾರತದ ಖ್ಯಾತ ಚೆಸ್ ಆಟಗಾರ ವಿಶ್ವನಾಥನ್ ಆನಂದ್ ಕೂಡ ಚೆನ್ನೈಯಲ್ಲಿ ಚೆಸ್ ಒಲಿಂಪಿಯಾಡ್ ನಡೆಯುತ್ತಿರುವುದಕ್ಕೆ ಅತೀವ ಹರ್ಷ ವ್ಯಕ್ತಪಡಿಸಿದ್ದಾರೆ.
ಚೆಸ್ ಒಲಿಂಪಿಯಾಡ್ 2 ವರ್ಷಕ್ಕೊಮ್ಮೆ ನಡೆಯುತ್ತದೆ. 2018ರಲ್ಲಿ ಜಾರ್ಜಿಯಾದಲ್ಲಿ ಚೆಸ್ ಒಲಿಂಪಿಯಾಡ್ ನಡೆದಾಗ ಮುಕ್ತ ವಿಭಾಗದಲ್ಲಿ 180 ದೇಶಗಳ 918 ಆಟಗಾರರು ಭಾಗವಹಿಸಿದ್ದರು. ಮಹಿಳಾ ವಿಭಾಗದಲ್ಲಿ 145 ದೇಶಗಳ 747 ಆಟಗಾರರು ಭಾಗವಹಿಸಿದ್ದರು.
ನಾವು 2000 ಆಟಗಾರರು ಬಂದರೂ ಸುಸಜ್ಜಿತವಾಗಿ ಟೂರ್ನಿ ನಡೆಸಲು ಸಿದ್ಧರಿರುವುದಾಗಿ ಭಾರತೀಯ ಚೆಸ್ ಒಕ್ಕೂಟವು ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!