ಉಕ್ರೇನ್ ನಿರಾಶ್ರಿತ ವಲಸಿಗರ ಸಂಖ್ಯೆ ಬರೋಬ್ಬರಿ 30 ಲಕ್ಷ!

 

ಹೊಸ ದಿಗಂತ ಡಿಜಿಟಲ್ ಡೆಸ್ಕ್

ರಷ್ಯ-ಉಕ್ರೇನ್ ಸಂಘರ್ಷದಲ್ಲಿ ಉಕ್ರೇನಿನಿಂದ ಯುರೋಪಿನ ದೇಶಗಳಿಗೆ ವಲಸೆ ಹೋದವರ ಸಂಖ್ಯೆ ಬರೋಬ್ಬರಿ 30 ಲಕ್ಷ, ಇದು ವಿಶ್ವಸಂಸ್ಥೆ ಹೇಳುತ್ತಿರುವ ಲೆಕ್ಕ.

3.8 ಮಿಲಿಯನ್ ಮಂದಿ ಉಕ್ರೇನ್ ತೊರೆದು ಬೇರೆ ದೇಶಗಳಲ್ಲಿ ನಿರಾಶ್ರಿತರಾಗಿ ಬದುಕು ತಳ್ಳುತ್ತಿದ್ದಾರೆ. ಈ ಪೈಕಿ ಶೇ. 90ರಷ್ಟು ಮಕ್ಕಳು ಮತ್ತು ಮಹಿಳೆಯರೇ ಆಗಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ. ಆದಾಗ್ಯೂ ಇತ್ತೀಚಿನ ವಾರಗಳಲ್ಲಿ ವಲಸಿಗ-ನಿರಾಶ್ರಿತರ ಸಂಖ್ಯೆಯಲ್ಲಿ ಇಳಿಮುಖ ಕಂಡುಬಂದಿದೆ ಎಂದು ಅದು ಹೇಳಿದೆ.

ಹೀಗೆ ನಿರಾಶ್ರಿತರಾದವರಲ್ಲಿ ಹೆಚ್ಚಿನ ಮಂದಿ ಪೊಲಂಡ್ ಹಾಗೂ ರೊಮಾನಿಯಾಗಳಲ್ಲಿ ಆಶ್ರಯ ಪಡೆದಿದಿದ್ದಾರೆ. ಸುಮಾರು 3 ಲಕ್ಷ ಮಂದಿ ರಷ್ಯದಲ್ಲೂ ಆಶ್ರಯ ಪಡೆದಿದ್ದಾರೆ ಎಂಬುದು ಅಂದಾಜು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!