ಸ್ವಿಸ್‌ ಓಪನ್‌ ಬ್ಯಾಡ್ಮಿಂಟನ್‌ ಪ್ರಶಸ್ತಿ ಗೆದ್ದ ಸಿಂಧು; ಈ ಸಾಧನೆ ಮಾಡಿದ ಭಾರತದ ಎರಡನೇ ಆಟಗಾರ್ತಿ

ಹೊಸದಿಗಂತ ವರದಿ ಡಿಜಿಟಲ್‌ ಡೆಸ್ಕ್‌
ಒಲಂಪಿಕ್‌ ಕಂಚಿನ ಪದಕ ವಿಜೇತೆ, ಖ್ಯಾತ ಷಟ್ಲರ್ ಪಿ.ವಿ ಸಿಂಧು ಸ್ವಿಸ್ ಓಪನ್-2022 ಟೂರ್ನಿಯಲ್ಲಿ ಮಹಿಳಾ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.
ಈ ಮೂಲಕ ಸ್ವಿಸ್ ಓಪನ್ ಗೆದ್ದ ಎರಡನೇ ಭಾರತೀಯ ಮಹಿಳಾ ಬ್ಯಾಡ್ಮಿಂಟನ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪುರುಷರ ವಿಭಾಗದ ಫೈನಲ್‌ನಲ್ಲಿ ಎಚ್‌.ಎಸ್‌. ಪ್ರಣಯ್‌ ವೋರೋಚಿತ ಸೋಲು ಕಂಡು ರನ್ನರ್ ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಸ್ವಿಟ್ಜರ್ಲೆಂಡ್​ನ ಬಾಸೆಲ್‌ನ ಸೇಂಟ್ ಜಾಕೋಬ್‌ಶಲ್ಲೆಯಲ್ಲಿ ನಡೆದ ಸ್ವಿಸ್‌ ಓಪನ್‌ ಫೈನಲ್‌ ನಲ್ಲಿ ಸಿಂಧು 21-16, 21-8 ಸೆಟ್​​ಗಳಿಂದ ಥಾಯ್ಲೆಂಡ್‌ ಆಟಗಾರ್ತಿ ಬುಸಾನನ್ ಒಂಗ್‌ಬಮ್ರುಂಗ್‌ಫಾನ್ ಅವರನ್ನು ಮಣಿಸುವ ಮೂಲಕ ಜಯಬೇರಿ ಭಾರಿಸಿದ್ದಾರೆ. ಬುಸಾನನ್ ವಿರುದ್ಧ 17 ಪಂದ್ಯಗಳನ್ನು ಆಡಿರುವ ಸಿಂಧು, 16 ಬಾರಿ ಗೆಲುವಿನ ದಾಖಲೆ ಹೊಂದಿದ್ದಾರೆ. ಸಾಕಷ್ಟು ರೋಚಕತೆಯಿಂದ ಕೂಡಿದ್ದ ಫೈನಲ್‌ ನಲ್ಲಿ ಜಯಗಳಿಸುವ ಮೂಲಕ ಸಿಂಧು ಸೈನಾ ನೆಹ್ವಾಲ್ ಬಳಿಕ ಸ್ವಿಸ್ ಓಪನ್ ಗೆದ್ದ ಭಾರತದ ಎರಡನೇ ಆಟಗಾರ್ತಿ ಎಂಬ ದಾಖಲೆ ಬರೆದರು. ಸೈನಾ ನೆಹ್ವಾಲ್ 2011ರಲ್ಲಿ ಸ್ವಿಸ್ ಓಪನ್ ಗೆದ್ದಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!