ಹೊಸದಿಗಂತ ಡಿಜಿಟಲ್ ಡೆಸ್ಕ್
94ನೇ ವರ್ಷದ ಆಸ್ಕರ್ ಪ್ರಶಸ್ತಿ ಪ್ರಧಾನ ಸಮಾರಂಭ ಅಮೇರಿಕಾದ ಲಾಸ್ ಎಂಜಲೀಸ್ ನಲ್ಲಿ ವಿಜೃಂಭಣೆಯಿಂದ ನಡೆದಿದೆ. “ಕೊಡಾʼ ಚಿತ್ರವು ಅತ್ಯುತ್ತಮ ಚಲನಚಿತ್ರವೆಂಬ ಪ್ರಶಸ್ತಿಗೆ ಭಾಜನವಾದರೆ, ಪ್ರಖ್ಯಾತ ಖ್ಯಾತ ನಟ ವಿಲ್ ಸ್ಮಿತ್ ಅತ್ಯುತ್ತಮ ನಟ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಜೆಸ್ಸಿಕಾ ಚಾಸ್ಟೇನ್ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಒಲಿದಿದೆ. ʼಡ್ಯೂನ್ʼ ಚಿತ್ರವು ಒಟ್ಟು ಆರುಪ್ರಶಸ್ತಿಗಳನ್ನು ಬಾಚಿಕೊಂಡಿದೆ.
ಅಕಾಡೆಮಿ ಪ್ರಶಸ್ತಿ ವಿಜೇತರ ಮತ್ತು ಚಲಚಿತ್ರಗಳ ವಿವರ ಇಲ್ಲಿದೆ…
ಅತ್ಯುತ್ತಮ ಚಿತ್ರ: ʼಕೋಡಾʼ (ನಿರ್ದೇಶನ- ಶಾನ್ ಹೆಡರ್)
ಅತ್ಯುತ್ತಮ ನಿರ್ದೇಶಕ: ಜೇನ್ ಕೋಪಿಯಾನ್ (ದ ಪವರ್ ಆಫ್ ದಿ ಡಾಗ್)
ಅತ್ಯುತ್ತಮ ನಟ: ವಿಲ್ ಸ್ಮಿತ್ – (ಚಿತ್ರ- ಕಿಂಗ್ ರಿಚರ್ಡ್)
ಅತ್ಯುತ್ತಮ ನಟಿ: ಜೆಸ್ಸಿಕಾ ಚಸ್ಟೈನ್ -(ಚಿತ್ರ- ದಿ ಐಸ್ ಆಫ್ ಟಮ್ಮಿ ಫಾಯೆ)
ಅತ್ಯುತ್ತಮ ಅಂತಾರಾಷ್ಟ್ರೀಯ ಚಿತ್ರ: ಡ್ರೈವ್ ಮೈ ಕಾರ್( ಜಪಾನ್)
ಅತ್ಯುತ್ತಮ ಮೂಲ ಹಾಡು: “ನೋ ಟೈಮ್ ಟು ಡೈ”
ಅತ್ಯುತ್ತಮ ಸಾಕ್ಷ್ಯಚಿತ್ರ: “ಸಮ್ಮರ್ ಆಫ್ ಸೋಲ್”
ಅತ್ಯುತ್ತಮ ಚಿತ್ರಕಥೆ: ಕೋಡಾ
ಅತ್ಯುತ್ತಮ ಮೂಲ ಚಿತ್ರಕಥೆ: “ಬೆಲ್ಫಾಸ್ಟ್”
ಅತ್ಯುತ್ತಮ ಪೋಷಕ ನಟಿ: ಅರಿಯಾನಾ ಡಿಬೋಸ್, “ವೆಸ್ಟ್ ಸೈಡ್ ಸ್ಟೋರಿ”
ಅತ್ಯುತ್ತಮ ಪೋಷಕ ನಟ: ಟ್ರಾಯ್ ಕೋಟ್ಸೂರ್ (ಕೋಡಾ)
ಅತ್ಯುತ್ತಮ ಅನಿಮೇಟೆಡ್ ಚಿತ್ರ: ಎನ್ಕಾಂಟೊ
ಅತ್ಯುತ್ತಮ ವಿಷುಯಲ್ ಎಫೆಕ್ಟ್ಸ್: ಡ್ಯೂನ್
ಅತ್ಯುತ್ತಮ ಛಾಯಾಗ್ರಹಣ: “ಡ್ಯೂನ್”
ಅತ್ಯುತ್ತಮ ಚಲನಚಿತ್ರ ಸಂಕಲನ: “ಡ್ಯೂನ್”
ಅತ್ಯುತ್ತಮ ಧ್ವನಿ ವಿನ್ಯಾಸ: “ಡ್ಯೂನ್”
ಅತ್ಯುತ್ತಮ ಮೇಕಪ್ ಮತ್ತು ಕೇಶ ವಿನ್ಯಾಸ: ದಿ ಐಸ್ ಆಫ್ ಟಮ್ಮಿ ಫೇಯ್
ಅತ್ಯುತ್ತಮ ಸಾಕ್ಷ್ಯಚಿತ್ರ : “ದಿ ಕ್ವೀನ್ ಆಫ್ ಬಾಸ್ಕೆಟ್ಬಾಲ್.”
ಅತ್ಯುತ್ತಮ ಕಿರುಚಿತ್ರ (ಅನಿಮೇಟೆಡ್): “ದಿ ವಿಂಡ್ಶೀಲ್ಡ್ ವೈಪರ್.”
ಅತ್ಯುತ್ತಮ ಲೈವ್ ಆಕ್ಷನ್ ಕಿರುಚಿತ್ರ : “ದಿ ಲಾಂಗ್ ಗುಡ್ಬೈ.”
ಅತ್ಯುತ್ತಮ ಒರಿಜಿನಲ್ ಸಾಂಗ್: ನೋ ಟೈಮ್ ಟು ಡೈ