ಹೊಸದಿಗಂತ ಡಿಜಿಟಲ್ ಡೆಸ್ಕ್
ಹಿಜಾಬ್ ವಿವಾದದ ವೇಳೆ ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದ್ದ ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್ ಪರ ಅಲ್ ಖೈದಾ ನಾಯಕ ಜವಾಹಿರಿ ಬ್ಯಾಟಿಂಗ್ ಮಾಡಿದ್ದಾನೆ.
ಈ ಬಗ್ಗೆ ಮಾತನಾಡಿದ ಬಿಜೆಪಿ ಶಾಸಕ ರಘುಪತಿ ಭಟ್ , ಹಿಜಾಬ್ ಹೋರಾಟಗಾರ್ತಿಯರ ಬಗ್ಗೆ ನಾನು ಅಂದು ಹೇಳಿದ್ದು ಇಂದು ನಿಜವಾಗಿದೆ.ಹೀಗೆ ಮುಂದುವರಿದರೆ ಆ ವಿದ್ಯಾರ್ಥಿಗಳನ್ನು ಆಲ್‌ಖೈದಾ ಪಟ್ಟಿಗೆ ಸೇರಿಸಬೇಕಾಗುತ್ತದೆ ಎಂದರು
ನೈಜ ಮುಸಲ್ಮಾನರು ಜಾಗೃತರಾಗಿ ಸಂಘಟನೆಗಳನ್ನು ಬಹಿಷ್ಕರಿಸಬೇಕಾಗಿದೆ. ಸಿಎಫ್‌ಐ, ಪಿಎಫ್‌ಐ, ಎಸ್‌ಡಿಪಿಐಗೆ ಆಲ್ ಖೈದಾ ಲಿಂಕ್ ಇದೆ. ಎನ್‌ಐಎ ತನಿಖೆಯಾದರೆ ಷಡ್ಯಂತ್ರ ಬೆಳಕಿಗೆ ಬರುತ್ತದೆ ಹೇಳಿದ್ದಾರೆ.
ಮಂಡ್ಯದಲ್ಲಿ ಹಿಜಾಬ್ ವರ್ಸಸ್ ಕೇಸರಿ ಶಾಲು ನಡುವೆಯೂ ಕಾಲೇಜಿಗೆ ಆಗಮಿಸಿದಂತ ಮುಸ್ಕಾನ್, ನೂರಾರು ವಿದ್ಯಾರ್ಥಿಗಳ ನಡುವೆಯೂ ಅಲ್ಲಾಹು ಅಕ್ಬರ್ ಎಂಬುದಾಗಿ ಘೋಷಣೆ ಕೂಗಿದ್ದಳು.