ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋಟ್ಯಾಂತರ ಅಭಿಮಾನಿಗಳ ಪಾಲಿನ ಪ್ರೀತಿಯ ʼಬನ್ನಿʼ, ತೆಲುಗಿನ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಅವರಿಗಿಂದು ಹುಟ್ಶುಹಬ್ಬದ ಸಂಭ್ರಮ. ಟಾಲಿವುಡ್ ನ ಪ್ರಖ್ಯಾತರು, ಇತರೆ ಚಿತ್ರರಂಗಳ ಸ್ಷಾರ್ ಗಳು ಅಲ್ಲುಗೆ ಶುಭಾಶಯ ಕೋರುತ್ತಿದ್ದಾರೆ.
ಅಲ್ಲು ಅರ್ಜುನ್ ಸಿನಿ ಕುಟುಂಬದ ಹಿನ್ನೆಲೆಯಿಂದ ಬಂದವರು. ಅಲ್ಲು ಮೆಗಾಸ್ಟಾರ್ ಚಿರಂಜೀವಿ ಅವರ ಅಳಿಯ, ಪದ್ಮಶ್ರೀ ಪುರಸ್ಕೃತ ಅಲ್ಲು ರಾಮಲಿಂಗಯ್ಯ ಅವರ ಮೊಮ್ಮಗ, ಖ್ಯಾತ ನಿರ್ದೇಶಕ ಅಲ್ಲು ಅರವಿಂದ್ ಪುತ್ರ ಅಲ್ಲು ಅರ್ಜುನ್ ಬಾಲ ಕಲಾವಿದನಾಗಿ ಚಿರಂಜೀವಿ ಅಭಿನಯದ ʻವಿಜೇತʼ ಸಿನಿಮಾದ ಮೂಲಕ ಸಿನಿ ರಂಗಕ್ಕೆ ಕಾಲಿಟ್ಟಿದ್ದರು. ಬಳಿಕ ಗಂಗೋತ್ರಿ ಸಿನಿಮಾ ಮೂಲಕ ಮೊದಲ ಬಾರಿಗೆ ನಾಯಕ ನಟನಾಗಿ ಎಂಟ್ರಿ ಕೊಟ್ಟರು. ಕೆ.ಘವೇಂದ್ರ ರಾವ್ ನಿರ್ದೇಶನದ ಈ ಚಿತ್ರ ನಿರೀಕ್ಷೆಗೂ ಮೀರಿದ ಹಿಟ್ ದಾಖಲಿಸಿತು. ನಂತರ ಸಾಲು ಸಾಲು ಸಿನಿಮಾಗಳಲ್ಲಿ ಬನ್ನಿ ಬ್ಯುಸಿಯಾದ್ರು. ಇದೀಗ ಐಕಾನಿಕ್ ಸ್ಟಾರ್ ಆಗಿ ಕೋಟ್ಯಂತರ ಅಭಿಮಾನಿಗಳ ಮನಗೆದ್ದಿದ್ದಾರೆ.
Happy Birthday Bunny @alluarjun 🎂 Your hard work & focus gives you success. Party hard & make this landmark birthday memorable. 🎉
— Chiranjeevi Konidela (@KChiruTweets) April 8, 2022
ಅಲ್ಲು ಅರ್ಜುನ್ ಅವರ ʻಸ್ಟೈಲಿಷ್ ಲುಕ್ ಅಭಿಮಾನಿಗಳಿಗೆ ಅಚ್ಚುಮೆಚ್ಚು. ಅವರು ಸ್ಟೈಲಿಶ್ ಸ್ಟಾರ್., ಐಕಾನ್ ಸ್ಟಾರ್ ಎಂಬ ಬಿರುದುಗಳನ್ನು ಅಭಿಮಾನಿಗಳಿಂದ ಗಳಿಸಿದ್ದಾರೆ. ಬನ್ನಿ ನೃತ್ಯ ಯುವಜನರಲ್ಲಿ ಕ್ರೇಜ್ ಹುಟ್ಟುಹಾಕಿದೆ. ಅವರ ಪ್ರತಿಯೊಂದು ಚಿತ್ರಗಳು ಟ್ರೆಂಡ್ ಸೆಟ್ಟರ್ ಎನ್ನಿಸಿಕೊಂಡಿವೆ. ಅದೆಷ್ಟೋ ಅಲ್ಲು ನೃತ್ಯ ಕಣ್ತುಂಬಿಕೊಳ್ಳಲೆಂದೇ ಥಿಯೇಟರ್ಗೆ ಬರುತ್ತಾರೆ.
ಈವರೆಗೂ ಒಂದು ಲೆಕ್ಕ ಇನ್ಮುಂದೆ ಒಂದು ಲೆಕ್ಕೆ ಎಂಬಂತೆ ಸುಕುಮಾರ್, ಬನ್ನಿ ಕಾಂಬಿನೇಷನಲ್ಲಿ ಇತ್ತೀಚೆಗಷ್ಟೇ ತೆರೆಕಂಡ ʻ ಪುಷ್ಪʼ. ಚಿತ್ರದ ಮೂಲಕ ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ತಗ್ಗೆದೆಲೆ ಎಂಬ ಡೈಲಾಗ್ ಸಖತ್ ಫೇಮಸ್ ಆಗಿದೆ. ಅಲ್ಲು ಅಭಿಮಾನಿಗಳು ಪುಷ್ಪ-2 ಸಿನಿಮಾಗಾಗಿ ಎದುರು ನೋಡ್ತಿದಾರೆ. ಈ ಚಿತ್ರದ ಮೂಲಕ ಈಗಿರುವ ಫ್ಯಾನ್ ಫಾಲೋಯಿಂಗ್ ದುಪ್ಪಟ್ಟಾಗಿದೆ ಎಂದರೆ ಸುಳ್ಳಾಗಲ್ಲ. ಬನ್ನಿ ಸಿನಿಮಾ ರಿಲೀಸ್ ಆದರೆ. ಥಿಯೇಟರ್ಗಳ ಬಳಿ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಾರೆ. ಹಾಲಿನ ಅಭಿಷೇಕ, ಅನ್ನದಾನ, ರಕ್ತದಾನಂತಹ ಸಾಮಾಜಿಕ ಕಾರ್ಯಗಳನ್ನು ಕೂಡ ಮಾಡುತ್ತಾರೆ.
ಇಂದು ಬನ್ನಿ ಹುಟ್ಟುಹಬ್ಬದ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಅಲ್ಲು ಅರ್ಜುನ್ ಅವರಿಗೆ ಹುಟ್ಟು ಹಬ್ಬದ ಶುಭಾಶಗಳನ್ನು ಕೋರಿದ್ದಾರೆ. ಸ್ಯಾಂಡಲ್ವುಡ್, ಟಾಲಿವುಡ್, ಬಾಲಿವುಡ್ ಸೇರಿದಂತೆ ಅನೇಕರು ಚಿತ್ರರಂಗಗಳ ಖ್ಯಾತನಾಮರು ಬರ್ತಡೇ ವಿಶಸ್ ತಿಳಿಸಿದ್ದಾರೆ.