ಕೊರೊನಾ ಕಠಿಣ ನಿರ್ಬಂಧಗಳ ವಿರುದ್ಧ ಡ್ರ್ಯಾಗನ್‌ ದೇಶದಲ್ಲಿ ಘರ್ಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಡ್ರ್ಯಾಗನ್ ದೇಶ ಕೊರೊನಾ ಮಾರಣಾಂತಿಕ ಕಾಯಿಲೆಯಿಂದ ನಲುಗುತ್ತಿದೆ. ಸರ್ಕಾರ ವಿಧಿಸಿರುವ ಕಠಿಣ ಕ್ರಮಗಳನ್ನು ಬಿರುದ್ಧ ಜನ ರೊಚ್ಚಿಗೆದ್ದಿದ್ದಾರೆ. ದಿನದಿಂದ ದಿನಕ್ಕೆ ಪರಿಸ್ಥಿತಿ ಮಿತಿಮೀರುತ್ತಿರುವುದರಿಂದ ಜನ ಆತಂಕಕ್ಕೊಳಗಾಗಿದ್ದಾರೆ.
Gavecall Drogonomics ನ ಅಧ್ಯಯನದ ಪ್ರಕಾರ, ಚೀನಾದ 100 ಪ್ರಮುಖ ನಗರಗಳಲ್ಲಿ 87 ನಗರಗಳಲ್ಲಿ ಕಠಿಣ ನಿರ್ಬಂಧಗಳನ್ನು ವಿಧಿಸಿದ್ದಾರೆ.

ಮುಖ್ಯವಾಗಿ ಶಾಂಘೈ ನಗರದಲ್ಲಿ ಮೂರು ವಾರಗಳಿಂದ ಆಹಾರ ಸಿಗದೆ ಜನ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಇದರ ಜೊತೆಗೆ ಒಂದೆಂದೇ ಕಂಪನಿಗಳು ಮುಚ್ಚುತ್ತಿದ್ದು, ಕೆಲಸ ಕಳೆದುಕೊಳ್ಳುವ ಭೀತಿಯಲಿದ್ದಾರೆ ಜನ. ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾದಂತೆ ಅಪಾರ್ಟ್‌ಮೆಂಟ್‌ಗಳು, ಮನೆಗಳನ್ನು ಕ್ವಾರಂಟೈನ್‌ಗಳಾಗಿ ಪರಿವರ್ತಿಸಲು ಪೊಲೀಸರು ಆದೇಶಗಳನ್ನು ನೀಡಿದ್ದಾರೆ. ಸರ್ಕಾರದ ಈ ನಿರ್ಧಾರದಿಂದ ಪೊಲೀಸರು ಮತ್ತು ಸ್ಥಳೀಯ ಜನರ ನಡುವೆ ಘರ್ಷಣೆ ನಡೆದಿದೆ.

ತೈವಾನ್, ಗುವಾಂಗ್‌ಝೌ, ಟ್ಯಾಂಗ್‌ಶಾನ್ ಮತ್ತು ಶಾಂಕ್ಸಿ ಪ್ರಾಂತ್ಯದ ರಾಜಧಾನಿ ಲಾಂಗ್‌ಫಾಂಗ್ ಸೇರಿದಂತೆ ಹಲವಾರು ನಗರಗಳಲ್ಲಿ ಕೋವಿಡ್ ನಿರ್ಬಂಧಗಳು ಮುಂದುವರಿದಿವೆ. ಲಾಕ್‌ಡೌನ್ ನಿರ್ಬಂಧಗಳನ್ನು ಬಿಗಿಯಾಗಿ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಚೀನಾದ ಬಹುದೊಡ್ಡ ಕಂಪನಿಗಳು ಮುಚ್ಚಲು ನಿರ್ಧಾರ ಮಾಡಿವೆ. ಕಾರು ತಯಾರಕ ಸಂಸ್ಥೆಗಳು ಟೆಸ್ಲಾ ಮತ್ತು ನಿಯೋ ಮತ್ತು ಐಫೋನ್ ತಯಾರಕ ಪೆಗಾಟ್ರಾನ್ ಕಾರ್ಪೊರೇಶನ್‌ನಂತಹ ಕಂಪನಿಗಳು ಮುಚ್ಚುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!