ಬ್ರಹ್ಮೋಸ್‌ ಕ್ಷಿಪಣಿ ಪರೀಕ್ಷೆ ಯಶಸ್ವಿ, ಭಾರತೀಯ ವಾಯಸೇನೆಗೆ ಮತ್ತಷ್ಟು ಬಲ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸುಖೋಯ್ ಯುದ್ಧ ವಿಮಾನದಿಂದ ಬ್ರಹ್ಮೋಸ್ ಕ್ಷಿಪಣಿಯ ಪರೀಕ್ಷೆ ಯಶಸ್ವಿಯಾಗಿದೆ. ಇದರಿಂದಾಗಿ ಭಾರತೀಯ ವಾಯುಸೇನೆಗೆ ಮತ್ತಷ್ಟು ಬಲ ಸಿಕ್ಕಂತಾಗಿದೆ. ಭಾರತೀಯ ನೌಕಾಪಡೆಯೊಂದಿಗೆ ವಾಯುಪಡೆಯು ಮಂಗಳವಾರ ಬಂಗಾಳಕೊಲ್ಲಿಯ ಪೂರ್ವ ಕರಾವಳಿಯಲ್ಲಿ ಪರೀಕ್ಷೆಯನ್ನು ನಡೆಸಿತು. ಬ್ರಹ್ಮೋಸ್ ಕ್ಷಿಪಣಿಯನ್ನು ಭಾರತೀಯ ನೌಕಾಪಡೆಯ ಹಡಗಿನಿಂದ ಸುಖೋಯ್ (SU30-MKL) ವಿಮಾನದ ಮೂಲಕ ಉಡಾವಣೆ ಮಾಡಲಾಯಿತು.

ಬ್ರಹ್ಮೋಸ್ ಕ್ಷಿಪಣಿಯು ತನ್ನ ಗುರಿಯನ್ನು ನಿಖರವಾಗಿ ಹೊಡೆದಿದೆ ಎಂದು ಭಾರತೀಯ ನೌಕಾಪಡೆ ಸ್ಪಷ್ಟಪಡಿಸಿದೆ. ಭಾರತೀಯ ವಾಯುಪಡೆಯ (ಐಎಎಫ್) ವಿಮಾನದ ಬ್ರಹ್ಮೋಸ್ ಕ್ಷಿಪಣಿಗಳು ಭೂಮಿ ಮೇಲೆ ಹಾಗೂ ಸಮುದ್ರದಲ್ಲಿನ ಗುರಿಗಳನ್ನು ಅತ್ಯಂತ ಸುಲಭವಾಗಿ ಛೇದಿಸಬಲ್ಲವು ಎಂದು ತಿಳಿಸಿದ್ದಾರೆ.

ಬ್ರಹ್ಮೋಸ್ ಕ್ಷಿಪಣಿಗಳಿಂದ ಐಎಎಫ್ ಮತ್ತಷ್ಟು ಬಲವನ್ನು ಹೊಂದಿದೆ. ಜೊತೆಗೆ ಭಾರತೀಯ ಸೇನೆಯು ಈ ತಿಂಗಳ 11 ರಂದು ದೇಶೀಯವಾಗಿ ಅಭಿವೃದ್ಧಿಪಡಿಸಿದ ಟ್ಯಾಂಕ್ ಪ್ರತಿರೋಧಕ ಮಾರ್ಗದರ್ಶಿ ಕ್ಷಿಪಣಿಗಳನ್ನು ಕೂಡಾ ರಾಜಸ್ಥಾನದ ಪೋಖ್ರಾನ್‌ನಲ್ಲಿ ಯಶಸ್ವಿಯಾಗಿ ಪರೀಕ್ಷಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!