ಭಾರತದ ವಿದೇಶಾಂಗ ನೀತಿಯನ್ನು ಕೊಂಡಾಡಿದ ರಷ್ಯಾ: ಜೈಶಂಕರ್‌ ನಿಜವಾದ ದೇಶಭಕ್ತ-ಸೆರ್ಗೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾರತದ ವಿದೇಶಾಂಗ ನೀತಿ ಹಾಗೂ ವಿದೇಶಾಂಗ ಮಂತ್ರಿ ಜೈ ಶಂಕರ್‌ ಅವರನ್ನು ರಷ್ಯಾ ವಿದೇಶಾಂಗ ಸಚಿವ ಸರ್ಗೆ ಹಾಡಿ ಹೊಗಳಿದ್ದಾರೆ. ಎಷ್ಟೇ ಒತ್ತಡವಿದ್ದರೂ ಭಾರತ ಮಾತ್ರ ತನ್ನ ವಿದೇಶಾಂಗ ನೀತಿಗೆ ಬದ್ದವಾಗಿದೆ. ಜೈಶಂಕರ್‌ ನಿಜವಾದ ದೇಶಭಕ್ತ ಹಾಗೂ ರಾಜತಾಂತ್ರಿಕ ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ರಷ್ಯಾ-ಉಕ್ರೇನ್ ನಡುವಿನ ಯುದ್ಧದಲ್ಲಿ ಭಾರತದ ನಿಲುವನ್ನು ಶ್ಲಾಘಿಸಿದರು. ಉಕ್ರೇನ್ ವಿರುದ್ಧ ಯುದ್ಧದ ಹಿನ್ನೆಲೆಯಲ್ಲಿ ಅನೇಕ ದೇಶಗಳು ರಷ್ಯಾದ ಮೇಲೆ ನಿರ್ಬಂಧಗಳನ್ನು ವಿಧಿಸಿವೆ. ಅಮೆರಿಕಾ ಸೇರಿದಂತೆ ಪಾಶ್ಚಿಮಾತ್ಯ ರಾಷ್ಟ್ರಗಳು ಭಾರತದ ಮೇಲೂ ಇದೇ ರೀತಿ ಒತ್ತಡ ಹೇರುತ್ತಿವೆ. ರಷ್ಯಾದಿಂದ ಆಮದು ಮಾಡಿಕೊಳ್ಳುವುದನ್ನು ಸ್ಥಗಿತಗೊಳಿಸುವಂತೆ ಭಾರತಕ್ಕೂ ಸಲಹೆ ನೀಡಲಾಗಿದೆ ಎಂದರು.

ಅಂತಾರಾಷ್ಟ್ರೀಯ ಒತ್ತಡಗಳಿಗೆ ನಮ್ಮ ದೇಶ ಮಣಿದಿಲ್ಲ. ನಮ್ಮ ದೇಶದ ಅಗತ್ಯಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿದೆ. ವಿಶೇಷವಾಗಿ ರಷ್ಯಾದ ವಿರುದ್ಧ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. “ನಾವು ನಮ್ಮ ದೇಶಕ್ಕಾಗಿ ಮಾತ್ರ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ನಮ್ಮ ನಿರ್ಧಾರಗಳು ರಾಷ್ಟ್ರೀಯ ಭದ್ರತೆ ಮತ್ತು ಅಭಿವೃದ್ಧಿಯ ಪ್ರಯೋಜನಕ್ಕಾಗಿ ಮಾತ್ರ ಎಂದು ಜೈ ಶಂಕರ್ ಹೇಳಿದ್ದರು.

ಈ ವಿಚಾರವನ್ನು ರಷ್ಯಾ ವಿದೇಶಾಂಗ ಸಚಿವರು ಸ್ಮರಿಸಿ, ಈ ರೀತಿಯ ನಿರ್ಧಾರಗಳನ್ನು ಯಾವುದೇ ದೇಶ ಸಾರ್ವಜನಿಕವಾಗಿ ಹೇಳುವುದಿಲ್ಲ. ಆದರೆ ಭಾರತ ಇದರ ಹೊರತಾಗಿದೆ ಎಂದು ಸೆರ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಭಾರತ ನಮಗೆ ಅತ್ಯಂತ ಸ್ನೇಹಪರ ದೇಶವಾಗಿದೆ. ಒಂದಾನೊಂದು ಕಾಲದಲ್ಲಿ ಎರಡೂ ದೇಶಗಳ ನಡುವೆ ಕಾರ್ಯತಂತ್ರದ ಪಾಲುದಾರಿಕೆ ಇತ್ತು. ನಾವು ಈಗ ಭಾರತವನ್ನು ಅತ್ಯಂತ ವಿಶೇಷವಾದ ಕಾರ್ಯತಂತ್ರದ ಪಾಲುದಾರ ಎಂದು ಪರಿಗಣಿಸುತ್ತೇವೆ. ಪ್ರಧಾನಿ ನರೇಂದ್ರ ಮೋದಿ ಅವರ ‘ಮೇಕಿಂಗ್ ಇಂಡಿಯಾ’ ಪ್ರಸ್ತಾವನೆಗೂ ಸೆರ್ಗೆಯ್ ಬೆಂಬಲ ನೀಡಿದ್ದಾರೆ. ಪ್ರಸ್ತಾವನೆಗೆ ಅನುಗುಣವಾಗಿ ರಷ್ಯಾದ ಹಲವು ಉತ್ಪನ್ನಗಳನ್ನು ಭಾರತದಲ್ಲಿ ತಯಾರಿಸಲಾಗುತ್ತಿದೆ ಎಂದರು. ರಕ್ಷಣಾ ಕ್ಷೇತ್ರದಲ್ಲಿ ಭಾರತಕ್ಕೆ ಯಾವುದೇ ನೆರವು ನೀಡಲು ರಷ್ಯಾ ಸಿದ್ಧವಿದೆ ಎಂಬ ಮಾತನ್ನು ಸ್ಪಷ್ಟಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!