ಬೇಬಿ ನಿರೀಕ್ಷೆಯಲ್ಲಿ ಮರಿಯಾ ಶರಪೋವಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಟೆನಿಸ್‌ ತಾರೆ ಮರಿಯಾ ಶರಪೋವಾ ʼಬೇಬಿʼ ನಿರೀಕ್ಷೆಯಲ್ಲಿದ್ದಾರೆ. ರಷ್ಯಾದ ಮಾಜಿ ಟೆನಿಸ್‌ ಆಟಗಾರ್ತಿ ಈ ಕುರಿತು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು ತಮ್ಮ ʼಬೇಬಿ ಬಂಪ್‌ʼ ಚಿತ್ರವನ್ನು ಪೋಸ್ಟ್‌ ಮಾಡಿ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.

2001 ರಲ್ಲಿ ತಮ್ಮ ಟೆನಿಸ್‌ ವೃತ್ತಿ ಜೀವನ ಆರಂಭಿಸಿದ ಅವರು ತಮ್ಮ ಉತ್ತಮ ಆಟದ ಮೂಲಕ ಜಗತ್ತಿನಾದ್ಯಂತ ಪ್ರಸಿದ್ಧಿಗಳಿಸಿದ್ದರು. ಐದು ಗ್ರಾಂಡ್‌ ಸ್ಲ್ಯಾಮ್‌ ಪ್ರಶಸ್ತಿ, ವಿಂಬಲ್ಡನ್‌ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿರುವ ಶರಪೋವಾ 2012 ರ ಒಲಂಪಿಕ್ಸ್‌ ನಲ್ಲಿ ಬೆಳ್ಳಿಪದಕ ಗೆದ್ದಿದ್ದರು.

2016 ರಲ್ಲಿ ನಿಷೇಧಿತ ಡ್ರಗ್ಸ್‌ ಸೇವನೆಯ ಆರೋಪದಲ್ಲಿ ಒಂ ವರ್ಷ ಬ್ಯಾನ್‌ ಆಗಿ 2017ರಲ್ಲಿ ಮತ್ತೆ ಮೈದಾನಕ್ಕಿಳಿದರೂ ಮುಂಚಿನಂತೆ ಸಫಲರಾಗಲಿಲ್ಲ. 2020ರಲ್ಲಿ ಟೆನಿಸ್‌ ಗೆ ವಿದಾಯ ಹೇಳಿದ ಶರಪೋವಾ, ಉದ್ಯಮಿ ಅಲೆಕ್ಸಾಂಡರ್‌ ಗಿಲ್ಕಸ್‌ ರೊಂದಿಗೆ ನಿವೃತ್ತಿ ಜೀವನ ನಡೆಸುತ್ತಿದ್ದಾರೆ. ಪ್ರಸ್ತುತ ಅವರ ಈ ಸಿಹಿ ಸುದ್ದಿ ಟೆನಿಸ್‌ ಅಭಿಮಾನಿಗಳಿಗೆ ಸಂತಸ ನೀಡಿದೆ.

 

 

 

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!