ತೈಲ ಸಂಸ್ಕರಣಾ ಘಟಕದಲ್ಲಿ ಭೀಕರ ಸ್ಫೋಟ; 100 ಜನರು ಸಜೀವ ದಹನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ನೈಜೀರಿಯಾ ದೇಶದ ಇಮೋ ರಾಜ್ಯಗಳ ಗಡಿಯಲ್ಲಿರುವ ತೈಲ ಸಂಸ್ಕರಣಾ ಘಟಕವೊಂದರಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ 100 ಕ್ಕೂ ಹೆಚ್ಚಿನ ಜನರು ಸಜೀವ ದಹನವಾದ ಘಟನೆ ನಡೆದಿದೆ.
ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿದ್ದ ತೈಲ ಸಂಸ್ಕರಣಾಗಾರದಲ್ಲಿ ಏಕಾಏಕಿ ಸ್ಪೋಟ ಸಂಭವಿದ್ದು, ಈ ಸಂದರ್ಭದಲ್ಲಿ ಘಟಕದಲ್ಲಿದ್ದ ನೂರು ಮಂದಿ ಮೃತಪಟ್ಟಿದ್ದಾರೆ.
ಸ್ಪೋಟದಲ್ಲಿ ಮೃತಟ್ಟವರ ದೇಹಗಳು ಗುರುತಿಸಲು ಸಾಧ್ಯವಾಗದಂತೆ ಸುಟ್ಟು ಕರಕಲಾಗಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇದು ಇತ್ತೀಚಿಗೆ ಆಫ್ರಿಕಾದಲ್ಲಿ ಸಂಭವಿಸಿರುವ ಅತಿ ದೊಡ್ಡ ದುರಂತವಾಗಿದೆ ಎಂದು ಹೇಳಲಾಗಿದೆ.
ಸಂಸ್ಕರಣಾ ಘಟಕದಲ್ಲಿ ವ್ಯಾಪಾರಕ್ಕಾಗಿ ತೈಲ ಘಟಕದ ಅಧಿಕಾರಿಗಳು ಮತ್ತು ಗ್ರಾಹಕರು ಒಟ್ಟುಗೂಡಿದ್ದ  ಸಂದರ್ಭದಲ್ಲಿಯೇ ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಡತನದ ಬೇಗೆಯಿಂದ ಬೇಯುತ್ತಿರುವ ನೈಜೀರಿಯಾ ದೇಶದಲ್ಲಿ ಕಚ್ಚಾ ತೈಲ ಸಂಸ್ಕರಣೆಯು ಹಣಕಾಸಿನ ಮೂಲ. ಆದರೆ ಖದೀಮರು ಇದನ್ನೇ ದಂಧೆಯಾಗಿಸಿಕೊಂಡಿದ್ದಾರೆ. ಅಲ್ಲಿನ ಪೈಪ್‌ಲೈನ್‌ ಗಳಲ್ಲಿ ಹಾದುಹೋಗುವ ಕಚ್ಚಾ ತೈಲವನ್ನು ಕಳ್ಳರು ದೋಚುತ್ತಾರೆ. ಆನಂತರ ಸಂಸ್ಕರಿಸಿ ಬ್ಲಾಕ್‌ ಮಾರ್ಕೆಟ್ ಗಳಲ್ಲಿ ಮಾರಾಟ ಮಾಡಲಾಗುತ್ತದೆ. ಇಂತಹ ಅಕ್ರಮ ಕೃತ್ಯಗಳನ್ನು ತಡೆಗಟ್ಟಲು ಅಲ್ಲಿನ ಸರ್ಕಾರವು ಅಕ್ರಮ ಸಂಸ್ಕರಣಾಗಾರಗಳ ಮೇಲೆ ದಾಳಿ ನಡೆಸಿ ನಾಶಮಾಡಲು ಮಿಲಿಟರಿಯನ್ನು ನಿಯೋಜಿಸಿದೆ. ಹಾಗಿದ್ದರೂ ದೇಶದಲ್ಲಿ ಅಕ್ರಮವಾಗಿ ತೈಲ ಘಟಕಗಳು ಅವ್ಯಾಹತವಾಗಿ ಹಬ್ಬಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!