ಅಧ್ಯಕ್ಷೀಯ ಚುನಾವಣೆ ಗೆದ್ದ ಮ್ಯಾಕ್ರೋನ್‌: ವಿಭಜಿತ ಫ್ರಾನ್ಸ್‌ ಅನ್ನು ಒಗ್ಗೂಡಿಸುವ ಶಪಥ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಫ್ರಾನ್ಸ್‌ ಅಧ್ಯಕ್ಷೀಯ ಚುನಾವಣೆಯಲ್ಲಿ ವಿರೋಧಿ ಮರೀನ್‌ ಲೆ ಪೆನ್‌ ವಿರುದ್ಧ ಇಮ್ಯಾನುವೆಲ್‌ ಮ್ಯಾಕ್ರೋನ್‌ ಭರ್ಜರಿ ಜಯ ಸಾಧಿಸಿದ್ದಾರೆ. ಆ ಮೂಲಕ ಮತ್ತೆ ಮುಂದಿನ ಐದು ವರ್ಷಗಳ ಅವಧಿಗೆ ಅವರು ಚುನಾಯಿತರಾಗಿದ್ದಾರೆ. ತಮ್ಮ ವಿರೋಧಿ ಮರಿನ್‌ ಲೆ ಪೆನ್‌ ವಿರುದ್ಧ 58.1% ರಷ್ಟು ಅಂತರದಿಂದ ಜಯ ಸಾಧಿಸಿರುವ ಮ್ಯಾಕ್ರೋನ್‌ “ಎಲ್ಲರ ಅಧ್ಯಕ್ಷನಾಗಿ ವಿಭಜಿತ ಫ್ರಾನ್ಸ್‌ ಅನ್ನು ಮತ್ತೆ ಒಗ್ಗೂಡಿಸುತ್ತೇನೆ” ಎಂದಿದ್ದಾರೆ. ಮತ್ತು ತಮ್ಮ ಗೆಲುವಿಗೆ ಕಾರಣರಾದ ಎಲ್ಲರಿಗೂ ಧನ್ಯವಾದಗಳನ್ನು ಹೇಳಿದ್ದಾರೆ.

ಸತತ ಎಂಟನೇ ಬಾರಿ ಸೋತಿರುವ ಬಲಪಂಥೀಯ ನಾಯಕಿ ಮರಿನ್‌ ಲೆ ಪೆನ್‌ ತಮ್ಮ ಸೋಲಿನ ನಂತರವೂ “ಹೆಚ್ಚು ಮತಗಳನ್ನು ಪಡೆದಿರುವುದು ತೃಪ್ತಿ ತಂದಿದೆ. ಇದು ಜಯ ಸಿಕ್ಕಷ್ಟೇ ಸಂತೋಷಕ್ಕೆ ಕಾರಣವಾಗಿದೆ” ಎಂದು ಪ್ರತಿಕ್ರಿಯಿದ್ದಾರೆ.

ಮ್ಯಾಕ್ರೋನ್‌ ಅವರ ಗೆಲುವಿಗೆ ಯುರೋಪಿನ ಅನೇಕ ನಾಯಕರು ಹರ್ಷ ವ್ಯಕ್ತಪಡಿಸಿದ್ದು ಯುರೋಪಿಯನ್‌ ಕಮಿಷನ್‌ ಅಧ್ಯಕ್ಷ ಉರ್ಸುಲಾ ವಾನ್ ಡೆರ್ ಲೇಯೆನ್ “ನಾವು ಒಟ್ಟಾಗಿ ಫ್ರಾನ್ಸ್ ಮತ್ತು ಯುರೋಪ್ ಅನ್ನು ಮುಂದಕ್ಕೆ ಸಾಗಿಸೋಣ” ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಮ್ಯಾಕ್ರೋನ್‌ ಅವರಿಗೆ ಬಲವಾಗಿ ಬೆಂಬಲ ನೀಡಿದ್ದ ವೊಲೊಡಿಮೋರ್‌ ಝೆಲೆನ್ಸ್ಕಿ ಕೂಡ ಅವರ ಈ ಗೆಲುವಿಗೆ ಸಂತಸ ವ್ಯಕ್ತಪಡಿಸಿದ್ದು “ನಾವು ಬಲವಾದ ಮತ್ತು ಏಕೀಕೃತ ಯುರೋಪನ್ನು ಎದುರು ನೋಡುತ್ತಿದ್ದೇವೆ” ಎಂದು ಹೇಳಿದ್ದಾರೆ. ಇಂಗ್ಲೆಂಡ್‌ ನ ಬೋರೀಸ್‌ ಜಾನ್ಸನ್ ಕೂಡ ಮ್ಯಾಕ್ರೋನ್‌ ಅವರ ಮರುಗೆಲುವಿಗೆ ಶುಭಾಶಯ ತಿಳಿಸಿದ್ದಾರೆ.

ಒಟ್ಟಾರೆಯಾಗಿ 72% ದಷ್ಟು ಮತದಾನವಾಗಿದ್ದು ಇದು 1969 ರಿಂದ ಇಲ್ಲಿಯವರೆಗೆ ಅತಿ ಕಡಿಮೆ ಎನ್ನಲಾಗಿದೆ. ಅವುಗಳಲ್ಲಿ 3 ಮಿಲಿಯನ್‌ ನಷ್ಟು ಮತಗಳು ಹಾಳಾಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!