ಸೇನೆಯ ಕಾರ್ಯಾಚರಣೆ ಮತ್ತು ಕ್ರಿಯಾತ್ಮಕ ದಕ್ಷತೆ ಹೆಚ್ಚಿಸುವತ್ತ ಗಮನ ಕೊಡುವೆ: ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನೂತನ ಸೇನಾ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ ಜನರಲ್ ಮನೋಜ್ ಪಾಂಡೆಯವರು “ಪ್ರಸ್ತುತ ಪರಿಸ್ಥಿತಿಗಳನ್ನು ನಿಭಾಯಿಸಲು ಸೇನೆಯ ಕಾರ್ಯಾಚರಣೆ ಮತ್ತು ಕ್ರಿಯಾತ್ಮಕ ದಕ್ಷತೆಯನ್ನು ಹೆಚ್ಚಿಸಲು ಅಗತ್ಯ ಸುಧಾರಣೆ, ಪುನಾರಚನೆ ಮತ್ತು ರೂಪಾಂತರಗಳ ಮೇಲೆ ಹೆಚ್ಚಿನ ಗಮನ ಹರಿಸುತ್ತೇನೆ ಎಂದು ಹೇಳಿದ್ದಾರೆ.

ಇಂದು ದೆಹಲಿಯ ಸೌಥ್‌ ಬ್ಲಾಕ್‌ ನಲ್ಲಿ ವಿದ್ಯುಕ್ತ ಸೇನಾ ಗೌರವಗಳನ್ನು ಸ್ವೀಕರಿಸಿದ ಅವರು “ತನ್ನೆಲ್ಲಾ ಪೂರಕ ಸೇವೆಗಳ ಸಮನ್ವಯದೊಂದಿಗೆ ದೇಶ ಭದ್ರತೆಗಿರುವ ಸವಾಲುಗಳನ್ನು ಎದುರಿಸಲು ಸಿದ್ಧವಾಗಿರುವುದು ಭಾರತೀಯ ಸೇನೆಯ ಕರ್ತವ್ಯ. ಈ ಹಿನ್ನೆಲೆಯಲ್ಲಿ ಅಂತರಿಕ ಸೇವೆಗಳ ಸಹಕಾರ ಮತ್ತು ಸಮನ್ವಯವನ್ನು ಹೆಚ್ಚಿಸುವ ಕಡೆ ಆದ್ಯತೆ ಕೊಡಲಾಗುವುದು. ಸಂಘರ್ಷವನ್ನು ಗಮನದಲ್ಲಿಟ್ಟುಕೊಂಡು ಸಮಕಾಲೀನ ಮತ್ತು ಭವಿಷ್ಯದ ಸವಾಲುಗಳನ್ನು ಎದುರಿಸಲು ಯುದ್ಧಸಿದ್ಧತೆ ಮತ್ತು ಕಾರ್ಯಾಚರಣೆಯ ಸನ್ನದ್ಧತೆಯನ್ನು ಖಚಿತಪಡಿಸಿಕೊಳ್ಳುವತ್ತ ಹೆಚ್ಚಿನ ಗಮನ ಕೊಡಲಾಗುತ್ತದೆ. ಸ್ವದೇಶೀಕರಣ ಮತ್ತು ಅತ್ಮನಿರ್ಭರತೆಯ ಆಧಾರದ ಮೇಲೆ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಸಾಮರ್ಥ್ಯದ ಅಭಿವೃದ್ಧಿಗೆ ಪ್ರಾಶಸ್ತ್ಯ ಕೊಡಲಾಗುತ್ತದೆ. ದೇಶಕಟ್ಟುವಲ್ಲಿ ತನ್ನದೇ ಕೊಡುಗೆಯನ್ನು ಭಾರತೀಯ ಸೇನೆ ನೀಡಿದೆ. ಪ್ರಸ್ತುತ ಸೇನೆಯನ್ನು ಮುನ್ನಡೆಸುವ ಜವಾಬ್ದಾರಿಯನ್ನು ನನಗೆ ನೀಡಿರುವುದು ಹೆಮ್ಮೆಯ ಸಂಗತಿಯಾಗಿದೆ” ಎಂದು ಅವರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!