Wednesday, June 29, 2022

Latest Posts

ʻರಾಗಾʼ ಭೇಟಿಗೆ ಅನುಮತಿ ನೀಡದ ಒಸ್ಮಾನಿಯಾ ವಿಶ್ವವಿದ್ಯಾಲಯ: ಉದ್ರಿಕ್ತರಿಂದ ಪ್ರತಿಭಟನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಭೆಗೆ ಅವಕಾಶ ನೀಡದಿರಲು ಒಸ್ಮಾನಿಯಾ ವಿಶ್ವವಿದ್ಯಾಲಯದ ಕಾರ್ಯಕಾರಿ ಮಂಡಳಿ ಮಹತ್ವದ ನಿರ್ಧಾರ ಕೈಗೊಂಡಿದೆ. ಒಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ, ರಾಹುಲ್‌ ಗಾಂಧಿ ಸಭೆಯಷ್ಟೇ ಅಲ್ಲ, ಯಾವುದೇ ಸಾರ್ವಜನಿಕ ಸಭೆಗಳಿಗೆ ಅವಕಾಶ ನೀಡದಂತೆ ಆದೇಶಿಸಿದ್ದಾರೆ. ಕ್ಯಾಂಪಸ್‌ ಒಳಗಡೆ ಕ್ಯಾಮೆರಾ ಬಳಕೆ ಸಹ ನಿಷೇಧ ಮಾಡಿದೆ

ಮೇ. 7 ರಂದು ಉಸ್ಮಾನಿಯಾ ಯೂನಿವರ್ಸಿಟಿಯ ಕಲಾ ಕಾಲೇಜಿನಲ್ಲಿ ರಾಹುಲ್ ಗಾಂಧಿ ವಿದ್ಯಾರ್ಥಿಗಳನ್ನು ಭೇಟಿ ಮಾಡಲು TPCC ಯೋಜಿಸಿತ್ತು. ಆದರೆ ಮಂಡಳಿಯ ಆದೇಶದ ವಿರುದ್ಧ ಕೆಲ ವಿದ್ಯಾರ್ಥಿ ಗುಂಪುಗಳು ಆಕ್ರೋಶ ವ್ಯಕ್ತಪಡಿಸಿದವು. ರಾಹುಲ್‌ ಗಾಂಧಿ ಭೇಟಿಗೆ ಅನುಮತಿ ನೀಡದಿದ್ದಕ್ಕೆ ಕಾಂಗ್ರೆಸ್‌ನ ವಿದ್ಯಾರ್ಥಿ ಸಂಘಟನೆ ಪ್ರತಿಭಟನೆಗಳು ನಡೆಸಿದರು. ವಿದ್ಯಾರ್ಥಿ ಸಂಘದ ಮುಖಂಡರು ಸಿಎಂ ಕೆಸಿಆರ್ ಪ್ರತಿಕೃತಿ ದಹಿಸಲು ಯತ್ನಿಸಿದರು. ವಿವಿ ಆವರಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾದ್ದರಿಂದ ಪೊಲೀಸರು ಮಧ್ಯಪ್ರವೇಶಿಸಿ ಪ್ರತಿಭಟನೆ ಹತ್ತಿಕ್ಕಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss