ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೆಜೆಂಡರಿ ಗಾಯಕ ಎ.ಆರ್. ರೆಹಮಾನ್ ಅವರ ಪುತ್ರಿ ಖತೀಜಾ ರೆಹಮಾನ್ ಅವರು ರಿಯಾಸ್ದೀನ್ ಶೇಕ್ ಮೊಹಮದ್ ಕೈ ಹಿಡಿದಿದ್ದಾರೆ. ಗುರುವಾರ ನಡೆದ ಈ ಮದುವೆ ಸಮಾರಂಭಕ್ಕೆ ಸಂಬಂಧಿಕರು ಹಾಗೂ ಆತ್ಮೀಯರು ಸಾಕ್ಷಿಯಾದರು. ತಮ್ಮ ಮಗಳ ಮದುವೆ ಸಂಭ್ರಮವನ್ನು ರೆಹಮಾನ್ ಅವರು ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ.
ಈ ಬಗ್ಗೆ ನವವಧು ಖತೀಜಾ ಕೂಡಾ ಫೋಟೋಗಳನ್ನು ಶೇರ್ ಮಾಡಿದ್ದು, “ನನ್ನ ಜೀವನದಲ್ಲಿ ಅತ್ಯಂತ ನಿರೀಕ್ಷಿತ ದಿನ ಇದು. ನನ್ನವನನ್ನು ಮದುವೆಯಾಗಿದ್ದೇನೆ” ಎಂದು ಶೀರ್ಷಿಕೆ ನೀಡಿದ್ದಾರೆ. ಪೋಸ್ಟ್ ನೋಡಿದ ಕೂಡಲೇ ಗಾಯಕಿ ಶ್ರೇಯಾ ಘೋಷಾಲ್, ಹರ್ಷದೀಪ್ ಕೌರ್ ಸೇರಿದಂತೆ ಇತರೆ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ನವ ದಂಪತಿಗೆ ಶುಭ ಹಾರೈಸಿದ್ದಾರೆ.