ಉದ್ಯೋಗಸ್ಥ ಮಹಿಳೆಯರು ಫಾಲೋ ಮಾಡಲೇಬೇಕಾದ ಸಂಗತಿಗಳಿವು..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಹಿಳೆಯರು ಅಡುಗೆ ಮನೆಗೆ ಮಾತ್ರ ಸೀಮಿತ ಎನ್ನುವಂತಹ ದಿನಗಳು ಕಳೆದು ಹೋಗಿವೆ. ಪ್ರಸ್ತುತ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಉದ್ಯೋಗಿಗಳಾಗಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದಾರೆ. ತಮ್ಮ ಬ್ಯುಸಿ ಶೆಡ್ಯೂಲ್‌ನಲ್ಲಿ ಆರೋಗ್ಯದ ಬಗ್ಗೆ ನಿಗಾ ವಹಿಸದಿರುವುದು ಸಾಕಷ್ಟು ಸಮಸ್ಯೆಗಳಿಗೆ ಸ್ವಾಗತ ಮಾಡಿದಂತೆ. ಅದಕ್ಕಾಗಿ ಕೆಲ ಕ್ವಿಕ್‌ ಟಿಪ್ಸ್‌ಗಳನ್ನು ಫಾಲೋ ಮಾಡಿ.

ಉತ್ತಮ ಆರೋಗ್ಯಕ್ಕೆ ಆಹಾರ ಮುಖ್ಯ ಎಂಬುದನ್ನು ಉದ್ಯೋಗಸ್ಥ ಮಹಿಳೆಯರು ನೆನಪಿಟ್ಟುಕೊಳ್ಳಬೇಕು. ಬೆಳಗ್ಗೆ ತಿಂಡಿ ತಿನ್ನಲು ಸಮಯ ಇಲ್ಲದಿದ್ದಲ್ಲಿ, ಕಡಲೆಬೀಜ, ಹೆಸರು ಕಾಳು, ಕಡಲೆಕಾಳನ್ನು ಹಿಂದಿನ ದಿನ ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಸೇವಿಸುವುದರಿಂದ ತಿಂಡಿ ಸ್ಕಿಪ್‌ ಮಾಡಿದಂತೆ ಆಗುವುದಿಲ್ಲ. ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು.

ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ಪದಾರ್ಥಗಳಲ್ಲಿ ಸೂಪ್ ಕೂಡ ಒಂದು. ವಿವಿಧ ರೀತಿಯ ಪೌಷ್ಟಿಕ ಸೂಪ್‌ಗಳನ್ನು ಮುಂಚೆಯೇ ತಯಾರಿಸಿ ಫ್ರಿಜ್‌ನಲ್ಲಿ ಒಂದು ವಾರದವರೆಗೆ ಸಂಗ್ರಹಿಸಬಹುದು. ಇದನ್ನು ಪ್ರತಿದಿನ ಬಿಸಿ ಮಾಡಿ ಊಟದ ಸಮಯದಲ್ಲಿ ಸೇವನೆ ಮಾಡಬಹುದು. ಇದರ ಜೊತೆಗೆ ಬೇಯಿಸಿದ, ಹಸಿ ತರಕಾರಿಗಳನ್ನು ಕೂಡ ತೆಗೆದುಕೊಳ್ಳಬಹುದು.

ಇವುಗಳ ಜೊತೆಗೆ ಕೆಲವು ಹಣ್ಣುಗಳು, ಬಿಸ್ಕೆಟ್ ಕಚೇರಿಗೆ ಕೊಂಡೊಯ್ದು ಕೆಲಸದ ಸಮಯದಲ್ಲಿ ಆಗಾಗ ಸೇವನೆ ಮಾಡಿದ್ರೆ, ಸುಸ್ತು, ಆಸಾಯ, ಮುಂತಾದ ಸಮಸ್ಯೆಯನ್ನು ತಡೆಗಟ್ಟಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!