ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಕಾಗುವ ಸಾಮಗ್ರಿ
ಅಕ್ಕಿ ಹಿಟ್ಟು – ಒಂದು ಕಪ್
ಕಡಲೆ ಹಿಟ್ಟು- ಎರಡು ದೊಡ್ಡ ಚಮಚ
ಶುದ್ಧ ಇಂಗು
ಮೆಣಸಿನ ಪುಡಿ-ಒಂದು ಟೀಸ್ಪೂನ್
ಅರಶಿನ ಹುಡಿ-ಒಂದು ಚಿಟಕಿ
ಉಪ್ಪು
ನೀರು
ಜೀರಿಗೆ ಕಾಳು
ಓಮಕಾಳು
ತೆಂಗಿನೆಣ್ಣೆ(ನಿಮ್ಮ ಆಯ್ಕೆ)
ಮಾಡುವ ವಿಧಾನ:
ಈ ಎಲ್ಲಾ ಸಾಮಗ್ರಿಗಳನ್ನು ಒಂದು ಸ್ಟೀಲ್ ಪಾತ್ರೆಗೆ ಸುರಿದು ಚೆನ್ನಾಗಿ ಮಿಶ್ರಣಮಾಡಿ. ಸ್ವಲ್ಪ ನೀರು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಕಲಸಿಟ್ಟುಕೊಳ್ಳಿ. ಜೀರಿಗೆ,ಓಂಕಾಳು ಸೇರಿಸಿಕೊಳ್ಳಿ.
ಈರುಳ್ಳಿ, ಆಲೂಗಡ್ಡೆ, ಗೆಣಸು, ಕ್ಯಾಪ್ಸಿಕಂ, ಮೆಣಸು, ಬೆಂಡೇಕಾಯಿ, ಬದನೆಕಾಯಿ, ಬಾಳೆಹಣ್ಣು, ಕಾಡ್ ಪೀರೆ, ಟೊಮ್ಯಾಟೊ, ಹೀರೇಕಾಯಿ ಹೀಗೆ ನಿಮ್ಮಲ್ಲಿ ಲಭ್ಯವಿರುವ ತರಕಾರಿಗಳನ್ನು ತೆಳ್ಳಗೆ ಸ್ಲೈಸ್ ಮಾಡಿ ಹಿಟ್ಟಿನಲ್ಲಿ ಅದ್ದಿ ಬಿಸಿ ಎಣ್ಣೆಯಲ್ಲಿ ಗರಿ ಗರಿಯಾಗಿ ಕರಿಯಿರಿ. ಬಿಸಿ ಬಿಸಿ ಬಜ್ಜಿರೆಡಿ…