Saturday, June 25, 2022

Latest Posts

ಆರ್ಥಿಕ ಸಂಕಷ್ಟದಲ್ಲಿ ಕಮಲ್ ಹಾಸನ್‌ ಮಾಜಿ ಪತ್ನಿ, ರಂಗಭೂಮಿ ಕಲಾವಿದೆಯಾದ ಸಾರಿಕಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

2004 ರಲ್ಲಿ ಕಮಲ್ ಹಾಸನ್ ಅವರಿಂದ ವಿಚ್ಚೇನ ಪಡೆದ ಸಾರಿಕಾ ಕಮಲ್ ಅವರ ಜೀವನ ಕಷ್ಟಕರವಾಗಿದ ಎಂದು ಅಳಲನ್ನು ತೋಡಿಕೊಂಡಿದ್ದಾರೆ. ವಿಚ್ಛೇದನದ ಬಳಿಕ ಸಾರಿಕಾ ಒಂಟಿಯಾಗಿ ಜೀವನ ನಡೆಸಲು ಮುಂಬೈಗೆ ತೆರಳಿದರು. ಮಕ್ಕಳಾದ ಶ್ರುತಿ ಹಾಸನ್ ಮತ್ತು ಅಕ್ಷರ ಹಾಸನ್ ಕೂಡ ಈಗ ತಮ್ಮ ತಾಯಿಯನ್ನು ನಿರ್ಲಕ್ಷಿಸುತ್ತಿದ್ದಾರಂತೆ. ಒಂದು ಕಾಲದಲ್ಲಿ ತಮಿಳು ಮತ್ತು ಹಿಂದಿಯಲ್ಲಿ ಸ್ಟಾರ್ ಹೀರೋಯಿನ್ ಆಗಿದ್ದ ಸಾರಿಕಾ ಅವರನ್ನು ಕಮಲ್ ಹಾಸನ್‌ ವಿವಾಹವಾದರು. ವಿವಾಹದ ಬಳಿಕ ಸಿನಿಮಾಗಳಿಂದ ದೂರ ಉಳಿದ ಸಾರಿಕಾ  ಫ್ಯಾಷನ್ ಡಿಸೈನರ್ ಆಗಿ ಕೆಲಸ ಮಾಡಿದರು. ವಿಚ್ಛೇದನ ಪಡೆದ ನಂತರ ಬಾಲಿವುಡ್‌ನಲ್ಲಿ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಜೀವನ ಸಾಗಿಸುತ್ತಿದ್ದಾರೆ. ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಕರೋನಾ ಅವಧಿಯಲ್ಲಿ ತಾನು ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದೇನೆ ಎಂದು ಹೇಳಿದ್ದಾರೆ.

ಅಮೆಜಾನ್ ಪ್ರೈಮ್‌ನಲ್ಲಿ ಬಂದ ‘ಮಾಡರ್ನ್ ಲವ್ ಮುಂಬೈ’ ಚಿತ್ರದಲ್ಲಿನ ಅಭಿನಯಕ್ಕೆ ಸಾರಿಕಾ ಮೆಚ್ಚುಗೆಯನ್ನು ಪಡೆದರು. ಈ ಸಂದರ್ಭದಲ್ಲಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಕಮಲ್‌ನಿಂದ ವಿಚ್ಛೇದನ ಪಡೆದ ಬಳಿಕ ಮತ್ತೆ ನಟಿಯಾಗಿ ಸಣ್ಣ ಪಾತ್ರಗಳನ್ನು ಮಾಡಲು ಪ್ರಾರಂಭಿಸಿದೆ. ಕರೋನಾ ಮತ್ತು ಲಾಕ್‌ಡೌನ್ ಸಮಯದಲ್ಲಿ ನನ್ನ ಬಳಿಯಿದ್ದ ಎಲ್ಲಾ ಹಣ ಖಾಲಿಯಾಗಿದೆ. ಏನು ಮಾಡಬೇಕೆಂದು ತಿಳಿಯದೆ ಮತ್ತೆ ರಂಗಭೂಮಿ ಕಲಾವಿದರ ಜತೆ ಕೆಲಸ ಮಾಡಿದೆ. ದಿನಕ್ಕೆ 2000 ರಿಂದ 2700 ನೀಡಲಾಗುತ್ತಿತ್ತು. ಈ ಕೆಲಸ ದಿನನಿತ್ಯವೂ ಇರುವುದಿಲ್ಲ. ಹಾಗಾಗಿ ನಾನು ಜೀವನ ಮಾಡಬೇಕೆಂದರೆ ಚಲನಚಿತ್ರಗಳಲ್ಲಿ ನಟಿಸಬೇಕು ಎಂದು ನಿರ್ಧಾರ ಮಾಡಿದ್ದು ಪಾತ್ರಗಳಿಗಾಗಿ ಹುಡುಕುತ್ತಿದ್ದೇನ ಎಂದರು.

ಅವರ ಈ ಮಾತುಗಳು ವೈರಲ್‌ ಆಗಿದ್ದು, ಸ್ಟಾರ್ ಹೀರೋಯಿನ್ ತಾಯಿಯಾಗಿ, ಸ್ಟಾರ್ ಹೀರೋ ಮಾಜಿ ಪತ್ನಿಯಾಗಿ, ಆರ್ಥಿಕ ಸಂಕಷ್ಟದಲ್ಲಿರುವುದು ಆಶ್ಚರ್ಯಕ್ಕೆ ಗುರಿಮಾಡಿದೆ. ಕಮಲ್ ಹಾಸನ್‌ ನೋಡಿಕೊಳ್ಳದಿದ್ದರೂ, ಇಬ್ಬರು ಹೆಣ್ಣುಮಕ್ಕಳು ತಾಯಿಯನ್ನು ನಿರ್ಲಕ್ಷಿಸುವುದು ಸರಿಯಲ್ಲ ಅಂತಿದಾರೆ ನೆಟ್ಟಿಗರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss