ಅಮೆರಿಕದಲ್ಲಿ ಮತ್ತೆ ಗುಂಡಿನ ಸದ್ದು; ಉತ್ಸವದಲ್ಲಿ ಗುಂಡಿನ ದಾಳಿಗೆ ಮಹಿಳೆ ಬಲಿ, 7 ಜನರಿಗೆ ಗಾಯ

ಹೊಸಸದಿಗಂತ ಡಿಜಿಟಲ್‌ ಡೆಸ್ಕ್‌
ಅಮೆರಿಕದ ಪೂರ್ವ ಒಕ್ಲಹೋಮಾದಲ್ಲಿ ನಡೆಯುತ್ತಿದ್ದ ಉತ್ಸವದಲ್ಲಿ ಬಂದೂಕುದಾರಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಮಹಿಳೆಯೊಬ್ಬರು ಮೃತಪಟ್ಟು, ಏಳು ಜನರು ಗಾಯಗೊಂಡಿದ್ದಾರೆ.
ಘಟನೆ ಸಂಬಂಧ ಪೊಲೀಸರು ಸ್ಕೈಲರ್ ಬಕ್ನರ್‌ ( 26) ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಬಾನುವಾರ ಮಧ್ಯರಾತ್ರಿ ಒಕ್ಲಾಹಾಮಾದ ತ್ರಾಫ್ಟ್ ಎಂಬಲ್ಲಿ ಆಯೋಜಿಸಲಾಗಿದ್ದ ಸ್ಮರಣಾ‌ ದಿನ ಕಾರ್ಯಕ್ರಮದಲ್ಲಿ ಸುಮಾರು 1500 ಜನರು ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಕೆಲವು ವ್ಯಕ್ತಿಗಳ ನಡುವೆ ಮಾತಿನ ಚಕಮಕಿ, ವಾಗ್ವಾದ ನಡೆದಿದೆ. ಆ ವೇಳೆ ಸಿಟ್ಟಿಗೆದ್ದ ದುಷ್ಕರ್ಮಿ ಗುಂಡಿನ ದಾಳಿ ನಡೆಸಿದ್ದಾನೆ. ಗುಂಡಿನ ಸದ್ದಿಗೆ ಬೆದರಿದ ಜನರು ದಿಕ್ಕಾಪಾಲಾಗಿ ಓಡಿದ್ದಾರೆ. ಗುಂಡೇಟಿಗೆ 39 ವರ್ಷದ ಮಹಿಳೆ ಬಲಿಯಾಗಿದ್ದು, ಇಬ್ಬರು ಮಕ್ಕಳು ಸೇರಿದಂತೆ 7 ಜನರು ಗಾಯಗೊಂಡರು ಎಂದು ಪೊಲೀಸರು ತಿಳಿಸಿದಾರೆ.
ಸ್ಥಳೀಯ ಕೆಫೆಯೊಂದರ ಮಾಲೀಕ ಘಟನೆ ಕುರಿತು ವಿವರ ನೀಡಿದ್ದು, ಉತ್ಸವ ನಡುವಿನಿಂದ ನಮಗೆ ಗುಂಡಿನ ಸದ್ದಿನಂತಹ ದೊಡ್ಡ ಸದ್ದು ಕೇಳಿಬಂತು. ನಾವು ಮೊದಲಿಗೆ ಇದೊಂದು ಪಟಾಕಿ ಸದ್ದು ಎಂದು ಭಾವಿಸಿದ್ದೆವು. ಆವೇಳೆ ಹೆದರಿದ ಜನರು ಎಲ್ಲೆಂದಲ್ಲಿ ಓಡಲಾರಂಭಿಸಿದರು. ತ್ರಾಫ್ಟ್ ಸಣ್ಣ ಪಟ್ಟಣವಾಗಿದ್ದು ಉತ್ಸವದಲ್ಲಿ ಪಾಲ್ಗೊಳ್ಳಲೆಂದು ಬಹಳಷ್ಟು ಜನರು ಆಗಮಿಸಿದ್ದರು. ಇದೊಂದು ದುರಾದೃಷ್ಟಕರ ಘಟನೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!