ಈಜಿಪ್ಟ್‌ನಲ್ಲಿ 250 ಮಮ್ಮಿ, 150 ಕಂಚಿನ ಪ್ರತಿಮೆ ಸೇರಿ ಪ್ರಾಚೀನ ಕಲಾಕೃತಿಗಳ ಬೃಹತ್‌ ಬಂಡಾರ ಪತ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಪುರಾತತ್ತ್ವಜ್ಞರು ಈಜಿಪ್ಟ್‌ ನ ಕೈರೋ ಬಳಿಯ ಸಕ್ಕಾರಾದ ಪ್ರಸಿದ್ಧ ನೆಕ್ರೋಪೊಲಿಸ್‌ನಲ್ಲಿ ಪ್ರಾಚೀನ ಈಜಿಪ್ಟಿನ ಕಲಾಕೃತಿಗಳ ಬಹುದೊಡ್ಡ ಬಂಡಾರವನ್ನು ಪತ್ತೆ ಹಚ್ಚಿದ್ದಾರೆ. ಇಲ್ಲಿ ದೊರೆತಿರುವ ಕಲಾಕೃತಿಗಳು ಕನಿಷ್ಠ 2,500 ವರ್ಷಗಳಷ್ಟು ಹಿಂದಿನವು ಎಂದು ಅಂದಾಜಿಸಲಾಗಿದೆ.
ಕ್ರಿ.ಪೂ.500ನೇ ಶತತಮಾನಕ್ಕೆ ಸೇರಿರುವ 250 ಮಮ್ಮಿ 150 ಕಂಚಿನ ಪ್ರತಿಮೆಗಳು ಹಾಗೂ ಅನುಬಿಸ್, ಅಮುನ್, ಮಿನ್, ಒಸಿರಿಸ್, ಐಸಿಸ್, ನೆಫೆರ್ಟಮ್, ಬ್ಯಾಸ್ಟೆಟ್ ಮತ್ತು ಹಾಥೋರ್ ದೇವರುಗಳ ಕಲಾಕೃತಿಗಳು ಮತ್ತು ಸಕ್ಕಾರ ಪಿರಮಿಡ್ ಅನ್ನು ನಿರ್ಮಿಸಿದ ವಾಸ್ತುಶಿಲ್ಪಿಯಾದ ಇಮ್ಹೋಟೆಪನ ತಲೆಯಿಲ್ಲದ ಪ್ರತಿಮೆಯು ಸೇರಿದಂತೆ ಬೃಹತ್‌ ಕಲಾಕೃತಿಗಳ ಬಂಡಾರವೇ ಸಿಕ್ಕಿದೆ. ಈಜಿಪ್ಟ್‌ನ ಪ್ರವಾಸೋದ್ಯಮ ಮತ್ತು ಪ್ರಾಚ್ಯವಸ್ತುಗಳ ಸಚಿವಾಲಯವು ಈ ವಸ್ತುಗಳನ್ನು ಪ್ರದರ್ಶನಕ್ಕೆ ಇರಿಸಿದೆ.
ಪ್ರಾಚೀನ ಈಜಿಪ್ಟಿನ ಪುರಾಣಗಳಲ್ಲಿ ಫಲವತ್ತತೆಯ ಸಂಕೇತ ದೇವತೆಯಾದ ಐಸಿಸ್‌ನ ಆರಾಧನಾ ಆಚರಣೆಗಳಲ್ಲಿ ಬಳಸಲಾಗುವ ಪ್ರಾಚೀನ ದೇವತೆಗಳ ಕಂಚಿನ ಪ್ರತಿಮೆಗಳು ಮತ್ತು ಕಂಚಿನ ಪಾತ್ರೆಗಳನ್ನು ಸಹ ಕಲಾಕೃತಿಗಳು ಹೊಂದಿವೆ ಎಂದು ಪುರಾತನ ವಸ್ತುಗಳ ಸುಪ್ರೀಂ ಕೌನ್ಸಿಲ್ ಮುಖ್ಯಸ್ಥ ಮೊಸ್ತಫಾ ವಜಿರಿ ಹೇಳಿದ್ದಾರೆ.
ಕ್ರಿ,.ಪೂ. 2630 ನಡುವೆ ಪ್ರಾಚೀನ ಈಜಿಪ್ಟ್ ಅನ್ನು ಆಳಿದ ಫರೋ ಡಿಜೋನರ್ಸ್‌ ದೊರೆಯ ಮುಖ್ಯ ವಾಸ್ತುಶಿಲ್ಪಿ ಇಮ್ಹೋಟೆಪ್ನ ತಲೆಯಿಲ್ಲದ ಕಂಚಿನ ಪ್ರತಿಮೆ (ಕ್ರಿ.ಪೂ. ರಲ್ಲಿ ರಚನೆ 2611) ಅನ್ನು ಪ್ರದರ್ಶಿಸಲಾಯಿತು.
ಮರದ ಶವಪೆಟ್ಟಿಗೆಗಳಲ್ಲಿ ಮಮ್ಮಿಗಳನ್ನು ಸಂರಕ್ಷಿಸಿಡಲಾಗಿದೆ, ಒಂದು ಶವಪೆಟ್ಟಿಗೆಯಲ್ಲಿ ಪಪೈರಸ್ ಭಾಷೆಯ ಸಂಕೇತಗಳನ್ನು ಚಿತ್ರಲಿಪಿಗಳಲ್ಲಿ ಬರೆಯಲಾಗಿದೆ. ಇವುಗಳನ್ನು ಅಧ್ಯಯನಕ್ಕಾಗಿ ಕೈರೋದಲ್ಲಿರುವ ಈಜಿಪ್ಟ್ ವಸ್ತುಸಂಗ್ರಹಾಲಯದ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!