ವಾಣಿಜ್ಯ ಬಳಕೆ ಎಲ್‌ಪಿಜಿ ದರ 135ರೂ ಇಳಿಕೆ, ಪ್ರಮುಖ ನಗರಗಳಲ್ಲಿ ಇಂದಿನ ದರ ಹೇಗಿದೆ..?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇಂದಿನಿಂದ (ಜೂನ್‌ 1) ದೇಶದಾದ್ಯಂತ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಇಳಿಕೆಯಾಗಿದೆ. 19 ಕೆಜಿ ವಾಣಿಜ್ಯ ಎಲ್‌ಪಿಜಿ ಪ್ರತಿ ಸಿಲಿಂಡರ್‌ಗೆ 135 ರೂ.ಗಳಷ್ಟು ಕಡಿಮೆಯಾಗಿದೆ. ಆದರೆ ಗೃಹಬಳಕೆಯೆ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಈ ಹಿಂದೆ ನಿಗದಿ ಮಾಡಿರುವ ಬೆಲೆಗೆ ಗೃಹಬಳಕೆ ಸಿಲಿಂಡರ್‌ ದೊರೆಯಲಿದೆ. ಅದರಂತೆ ಬೆಂಗಳೂರಿನಲ್ಲಿ ಗೃಹಬಳಕೆಯ 14.2 ಕೆ.ಜಿ. ತೂಕದ ಸಿಲಿಂಡರ್‌ ದರ ₹ 1,006 ರಷ್ಟಿದೆ.

ಪ್ರಮುಖ ನಗರಗಳಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಪರಿಷ್ಕೃತ ದರ 

ದೆಹಲಿ- 2,219 ರೂ.

ಬೆಂಗಳೂರು- 2,300ರೂ.

ಕೋಲ್ಕತ್ತಾ- 2,322 ರೂ.

ಮುಂಬೈ- 2,171.50 ರೂ.,

ಚೆನ್ನೈ- 2,373 ರೂ.

 

ಕಳೆದ ತಿಂಗಳು ಮೇ 1ರಂದು 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ 102.50 ರೂ ಏರಿಕೆಯಾಗಿತ್ತು. ಇದಕ್ಕೂ ಮುನ್ನ ಏಪ್ರಿಲ್ 1 ರಂದು ಎಲ್‌ಪಿಜಿ ಸಿಲಿಂಡರ್‌ಗೆ 250 ರೂ. ಮಾರ್ಚ್1 ರಂದು 105 ರೂ.ಗಳಷ್ಟು ಹೆಚ್ಚಿಸಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!