ಹೊಸದಿಗಂತ ಡಿಜಿಟಲ್ ಡೆಸ್ಕ್:
14ನೇ ಆವೃತ್ತಿ ಐಪಿಎಲ್ ಪಂದ್ಯದ ವೇಳೆ ಮೈದಾನದಲ್ಲೇ ಗರ್ಲ್ಫ್ರೆಂಡ್ಗೆ ಪ್ರಪೋಸ್ ಮಾಡಿ, ಉಂಗುರ ತೊಡಿಸಿದ್ದ ದೀಪಕ್ ಚಹರ್ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಉತ್ತರ ಪ್ರದೇಶದ ಆಗ್ರಾದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದರ ಬೆನ್ನಲ್ಲೇ ಕೆಲವೊಂದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಮೊದಲ ಸಲ ನಿಮ್ಮನ್ನು ಭೇಟಿಯಾದ ಕ್ಷಣ ನನಗೆ ಸರಿಯಾದ ವ್ಯಕ್ತಿ ನೀವೊಬ್ಬರೇ ಎಂದೆನಿಸಿತು. ನಮ್ಮ ಜೀವನದಲ್ಲಿ ನಾವು ಜೊತೆಯಾಗಿ ಸಾಕಷ್ಟು ಆನಂದಿಸಿದ್ದೇವೆ ಹಾಗೂ ಮುಂದಿನ ದಿನಗಳಲ್ಲಿಯೂ ಇದನ್ನು ಹಾಗೆಯೇ ಉಳಿಸಿಕೊಳ್ಳುತ್ತೇನೆ ಎಂದು ನಿಮ್ಮ ಬಳಿ ಪ್ರಮಾಣ ಮಾಡುತ್ತೇನೆ. ಇದು ನನ್ನ ಜೀವನದ ಅತ್ಯಂತ ಅದ್ಭುತ ಕ್ಷಣ. ದಯವಿಟ್ಟು ಪ್ರತಿಯೊಬ್ಬರೂ ನಮ್ಮನ್ನು ಆಶೀರ್ವದಿಸಿ ಎಂದು ದೀಪಕ್ ಚಹರ್ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ದುಬೈನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದ ವೇಳೆ ಚೆನ್ನೈ ತಂಡದ ದೀಪಕ್ ಚಹರ್ ತಮ್ಮ ಗೆಳತಿ ಜಯಾ ಭಾರದ್ವಾಜ್ಗೆ ಲವ್ ಪ್ರಪೋಸ್ ಮಾಡಿದ್ದರು. ಇದಕ್ಕೆ ಅವರು ಯೆಸ್ ಎಂಬ ಉತ್ತರ ನೀಡಿದ್ದರು.
2021ರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡಿದ್ದ ದೀಪಕ್ ಚಹರ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಈ ಸಲದ ಐಪಿಎಲ್ಗೋಸ್ಕರ ಬರೋಬ್ಬರಿ 14 ಕೋಟಿ ರೂಪಾಯಿ ನೀಡಿ ಅವರನ್ನ ಚೆನ್ನೈ ತಂಡ ಖರೀದಿ ಮಾಡಿತ್ತು. ಆದರೆ, ಗಾಯದ ಸಮಸ್ಯೆಯಿಂದಾಗಿ ಸೀಸನ್ನಿಂದ ಹೊರಬಿದ್ದಿದ್ದರು.