ಪಾಕ್ ಡ್ರೋನ್​ ಮೂಲಕ ಭಾರತಕ್ಕೆ ಹೆರಾಯಿನ್ ಎಸೆತ: ನಾಲ್ವರು ಸ್ಮಗ್ಲರ್​ಗಳ ಸೆರೆ

ಹೊಸದಿಗಂತ ಡಿಜಿಟಲ್ ಡೆಸ್ಕ್‌

ಪಾಕಿಸ್ತಾನವು ಭಾರತದ ಭೂ ಪ್ರದೇಶದೊಳಗೆ ಡ್ರೋನ್​ ಮೂಲಕ ಸುಮಾರು 15 ಕೋಟಿ ಮೌಲ್ಯದ ಹೆರಾಯಿನ್​ ಎಸೆದ ನಾಲ್ವರು ಕಳ್ಳಸಾಗಣಿಕೆದಾರರನ್ನ ಗಡಿ ಭದ್ರತಾ ಪಡೆ (ಬಿಎಸ್​​ಎಫ್​) ಸಿಬ್ಬಂದಿ ಬಂಧಿಸಿ, ಹೆರಾಯಿನ್​ ವಶಪಡಿಸಿಕೊಂಡಿದ್ದಾರೆ.
ರಾಜಸ್ಥಾನದ ಶ್ರೀಗಂಗಾನಗರ ಜಿಲ್ಲೆಯಲ್ಲಿ ಭಾರತ-ಪಾಕ್​ ಗಡಿಯಲ್ಲಿ ಮಂಗಳವಾರ ಅಂದಾಜು 3.5 ಕೆಜಿ ಹೆರಾಯಿನ್​ನನ್ನು ದ್ರೋನ್​​ ಮೂಲಕ ಭಾರತದ ಗಡಿಯೊಳಗೆ ಬಿಡಲಾಗಿತ್ತು. ಈ ಹೆರಾಯಿನ್​ನನ್ನು ಬಂಡಲ್​ನಲ್ಲಿ ಸುತ್ತಲಾಗಿತ್ತು. ಈ ಸಂಬಂಧ ನಾಲ್ವರನ್ನು ಬಂಧಿಸಿದ್ದು, ಇವರು ಪಂಜಾಬ್​ ನಿವಾಸಿಗಳಾಗಿದ್ದಾರೆ.
ಕಳೆದ ಒಂದು ವಾರದಲ್ಲೇ ಎರಡನೇ ಬಾರಿಗೆ ಭಾರಿ ಪ್ರಮಾಣದ ಹೆರಾಯಿನ್​ ವಶಪಡಿಸಿಕೊಳ್ಳಲಾಗಿದೆ. ಕೆಲ ದಿನಗಳ ಹಿಂದೆ 35 ಕೋಟಿ ರೂ. ಮೌಲ್ಯದ ಹೆರಾಯಿನ್​ನೊಂದಿಗೆ ಐವರು ಆರೋಪಿಗಳನ್ನು ಬಿಎಸ್​ಎಪ್​ ಸಿಬ್ಬಂದಿ ಜಪ್ತಿ ಮಾಡಿದ್ದರು. ಆಗ ಕೂಡ ಪಾಕಿಸ್ತಾನದ ಡ್ರೋನ್​ ಮೂಲಕವೇ ಭಾರತದ ಗಡಿಯೊಳಗೆ ಹೆರಾಯಿನ್ ಎಸೆಯಲಾಗಿತ್ತು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!