ಲೋನ್ ಆಪ್ ಗಳಿಂದ ದೂರ ಇರಿ: ಉತ್ತರ ಕನ್ನಡ ಜಿಲ್ಲಾ ಪೊಲೀಸರಿಂದ ಜನರಿಗೆ ಸೂಚನೆ

ಹೊಸದಿಗಂತ ವರದಿ,ಅಂಕೋಲಾ:

ಇತ್ತೀಚಿನ ದಿನಗಳಲ್ಲಿ ಲೋನ್ ಆಪ್ ಗಳ ಮುಖಾಂತರ ಸಾಲಕೊಡುವ ಸೈಬರ್ ವಂಚಕರ ಜಾಲ ಸಕ್ರಿಯವಾಗಿದ್ದು ಜನರಿಗೆ ಲಕ್ಷಾಂತರ ರೂಪಾಯಿ ರೂಪಾಯಿ ವಂಚನೆ ಮಾಡಲಾಗುತ್ತಿದೆ ಈ ಕುರಿತಂತೆ ಸಾರ್ವಜನಿಕರು ಜಾಗ್ರತೆ ವಹಿಸುವಂತೆ ಉತ್ತರ ಕನ್ನಡ ಜಿಲ್ಲಾ ಪೊಲೀಸರ ಪ್ರಕಟನೆ ತಿಳಿಸಿದ್ದು ಸಾಮಾಜಿಕ ಜಾಲ ತಾಣಗಳಲ್ಲಿ ಹೆಚ್ಚಾಗಿ ಹರಿಬಿಡುತ್ತಿರುವ ಲೋನ್ ಆಪ್ ಗಳಿಂದ ದೂರ ಇರುವಂತೆ ಸೂಚಿಸಿದ್ದಾರೆ.
ಏನಿದು ವಂಚನೆ ಜಾಲ
ಮೊಬೈಲ್ ಪೋನುಗಳ ಮೂಲಕ ಸಾಲ ನೀಡುವ ಹಲವಾರು ಆಪ್ ಗಳ ಕುರಿತು ಜಾಹಿರಾತುಗಳು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದ್ದು ತ್ವರಿತಗತಿಯಲ್ಲಿ ಸಾಲ ನೀಡುವ ಕುರಿತು ಆಶೆ,ಆಮಿಷಗಳನ್ನು ಒಡ್ಠಲಾಗುತ್ತಿದ್ದು ಯಾರಾದರೂ ಅದನ್ನು ಡೌನ್ ಲೋಡ್ ಮಾಡಿಕೊಂಡರೆ ಅವರ ಮೊಬೈಲಿನಲ್ಲಿರುವ ವೈಯಕ್ತಿಕ ಮಾಹಿತಿಗಳು, ಪೋನ್ ನಂಬರುಗಳು,ಪ್ರಮುಖ ಸಾಮಾಜಿಕ ಜಾಲ ತಾಣಗಳು ಸೇರಿದಂತೆ ಎಲ್ಲದರ ಮೇಲೆ ವಂಚಕರು ಹಿಡಿತ ಸಾಧಿಸುತ್ತಾರೆ.
ಒಂದು ವಾರದ ಮಟ್ಟಿಗೆ ಸಾಲ ನೀಡಿ ಅತ್ಯಧಿಕ ಬಡ್ಡಿ ವಸೂಲಿ ಮಾಡಲಾಗುತ್ತದೆ.
ಸಾಲವನ್ನು ನಿಗದಿತ ಅವಧಿಯೊಳಗೆ ಪಾವತಿ ಮಾಡಿದರೂ ಮತ್ತೆ ಮತ್ತೆ ಹಣಕ್ಕಾಗಿ ಬೇಡಿಕೆ ಇಟ್ಟು ಮೊಬೈಲ್ ಮೂಲಕ ಪಡೆದ ವೈಯಕ್ತಿಕ ಮಾಹಿತಿಗಳನ್ನು ಮುಂದಿಟ್ಟು ಮಾನಸಿಕ ಹಿಂಸೆ ನೀಡುವ ಕೃತ್ಯಗಳನ್ನು ನಡೆಸಲಾಗುತ್ತದೆ ಎಂದು ವಂಚಕರ ಕೃತ್ಯಗಳ ಕುರಿತು ಮಾಹಿತಿ ನೀಡಲಾಗಿದೆ.
ಲೋನ್ ಆಪ್ ಗಳಿಗೆ ಸರ್ಕಾರದ ಯಾವುದೇ ಮಾನ್ಯತೆ ಇರುವುದಿಲ್ಲ ಈಗಾಗಲೇ ಸಾಕಷ್ಟು ಲೋನ್ ಆಪ್ ಗಳಿಗೆ ಕಡಿವಾಣ ಹಾಕಲಾದರೂ ನೂರಾರು ಸಂಖ್ಯೆಯಲ್ಲಿ ಹೊಸ ಆಪ್ ಗಳು ಸೃಷ್ಟಿಯಾಗುತ್ತಲೇ ಇವೆ ಆದ್ದರಿಂದ ಸಾರ್ವಜನಿಕರು ಈ ವಿಷಯದಲ್ಲಿ ಜಾಗೃತರಾಗಬೇಕು ಜಿಲ್ಲೆಯಲ್ಲಿ ಯಾರಾದರೂ ಈ ರೀತಿಯ ವಂಚನೆಗೆ ಸಿಲುಕಿಕೊಂಡರೆ
ಸೈಬರ್ ಪೊಲೀಸರಿಗೆ ದೂರು ನೀಡುವಂತೆ ಜಿಲ್ಲಾ ಪೊಲೀಸರ ಪ್ರಕಟನೆಯಲ್ಲಿ ತಿಳಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!