ಬಾವಿಗೆ ಬಿದ್ದ ಚಿರತೆಯ ರಕ್ಷಣೆ, ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಒಡಿಶಾದ ಸಂಬಲ್‌ಪುರ ಜಿಲ್ಲೆಯ ಹಿಂದೋಲ್ ಘಾಟ್‌ನಲ್ಲಿ ಚಿರತೆಯೊಂದು ಬಾವಿಗೆ ಬಿದ್ದಿದೆ. ಬಾವಿ ಬಹಳ ಆಳ ಮತ್ತು ನೀರು ಇರುವುದರಿಂದ ಮೇಲಕ್ಕೆ ಬರಲಾಗದೆ ಒದ್ದಾಡಿದೆ. ಚಿರತೆ ಘರ್ಜನೆ ಕೇಳಿದ ಸ್ಥಳೀಯರು ಭಯಭೀತರಾಗಿ ಸುತ್ತಲೂ ನೋಡಿದ್ದಾರೆ. ಸಮೀಪದಲ್ಲಿರುವ ಬಾವಿಯಿಂದ ಘರ್ಜನೆಯ ಸದ್ದು ಕೇಳಿ ಬಾವಿಯಲ್ಲಿ ನೋಡಿದಾಗ ಚಿರತೆ ಕಾಣಿಸಿಕೊಂಡಿದೆ.

ಕೂಡಲೇ ಅರಣ್ಯಾಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ. ಅರಣ್ಯಾಧಿಕಾರಿಗಳು ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಹಗ್ಗ ಹಾಗೂ ಏಣಿಯ ಸಹಾಯದಿಂದ ಚಿರತೆಯನ್ನು ರಕ್ಷಣೆ ಮಾಡಿದ್ದಾರೆ. ಏಣಿಯ ಮೂಲಕ ಹೊರಬಂದ ಚಿರತೆ ಸ್ಥಳದಿಂದ ಕಾಲ್ಕಿತ್ತಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಬಗ್ಗೆ ಸ್ಥಳೀಯ ಅಗ್ನಿಶಾಮಕ ಅಧಿಕಾರಿ ಮಿಶ್ರಾ ಕಿಶನ್ ಮಾತನಾಡಿ, ಚಿರತೆ ರಾತ್ರಿಯ ಸಮಯದಲ್ಲಿ ಗಮನಿಸದೆ ಬಾವಿಯೊಳಕ್ಕೆ ಬಿದ್ದಿದೆ. ಏಣಿಯ ಸಹಾಯದಿಂದ ಅದನ್ನು ರಕ್ಷಣೆ ಮಾಡಲಾಗಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!