ಗಡಿಯಲ್ಲಿ ಬೆಳ್ಳಂಬೆಳಗ್ಗೆ ಆತಂಕ ಹುಟ್ಟಿಸಿದ ಡ್ರೋಣ್ ಹಾರಾಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಗುರುವಾರ ಬೆಳಗಿನ ಜಾವ ಜಮ್ಮು ಮತ್ತು ಕಾಶ್ಮೀರದ ಅರ್ನಿಯಾ ಸೆಕ್ಟರ್‌ನ ಅಂತರಾಷ್ಟ್ರೀಯ ಗಡಿ ಸಮೀಪ ಡ್ರೋನ್‌ ಕಾಣಿಸಿಕೊಂಡಿದೆ. ಕೂಡಲೇ ಬಿಎಸ್‌ಎಸಫ್‌ ಪಡೆ ಗುಂಡು ಹಾರಿಸುತ್ತಿದ್ದಂತೆ ಡ್ರೋಣ್‌ ವಾಪಸ್‌ ಹೋಗಿದೆ. ಇಂದು ಬೆಳಗಿನ ಜಾವ 4.15ರ ಸುಮಾರಿಗೆ ಡ್ರೋನ್ ಹಾರಾಟ ಕಂಡುಬಂದಿದ್ದು, ಕೂಡಲೇ ಬಿಎಸ್‌ಎಫ್ ಪಡೆ ಡ್ರೋನ್ ಮೇಲೆ ಗುಂಡು ಹಾರಿಸುತ್ತಿದ್ದಂತೆ ಡ್ರೋನ್ ಹಿಂತಿರುಗಿರುವ ಬಗ್ಗೆ ಬಿಎಸ್‌ಎಫ್‌ ಹೇಳಿದೆ.

ಡ್ರೋನ್ ಸುಮಾರು 300 ಮೀಟರ್ ಎತ್ತರದಲ್ಲಿ ಹಾರುತ್ತಿತ್ತು ಎನ್ನಲಾಗಿದೆ. ಅರ್ನಿಯಾಕ್ಕೆ ಪಾಕಿಸ್ತಾನದ ಕಡೆಯಿಂದ ಬರುವ ಡ್ರೋನ್‌ಗಳು ಇದೇ ಮೊದಲೇನಲ್ಲ ಈ ಹಿಂದೆಯೂ ಈ ರೀತಿಯ ಚಟುವಟಿಕೆಗಳು ನಡೆದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೇ 15 ಮತ್ತು ಫೆಬ್ರವರಿ 24 ರಂದು ಜಮ್ಮುವಿನ ಅಂತರರಾಷ್ಟ್ರೀಯ ಗಡಿಯಲ್ಲಿ ಇದೇ ರೀತಿಯ ಡ್ರೋನ್ ಚಲನೆ ವರದಿಯಾಗಿದೆ, ಕೂಡಲೇ ಪೊಲೀಸರ ವಿಶೇಷ ಕಾರ್ಯಾಚರಣೆ ಗುಂಪು (SOG) ಕಾರ್ಡನ್-ಅಂಡ್-ಸರ್ಚ್ ಕಾರ್ಯಾಚರಣೆಯ ಮೂಲಕ ಡ್ರೋನ್‌ಗಳನ್ನು ವಶಪಡಿಸಿಕೊಂಡಿವೆ.

ಇದರಲ್ಲಿ ಮೂರು ರಿಮೋಟ್-ನಿಯಂತ್ರಿತ ಐಇಡಿಗಳು, ಡಿಟೋನೇಟರ್‌ಗಳು, 3 ಸ್ಫೋಟಕ ಬಾಟಲಿಗಳು, ಕಾರ್ಡೆಟೆಕ್ಸ್ ತಂತಿಯ ಒಂದು ಬಂಡಲ್, ಎರಡು ಐಇಡಿ ಟೈಮರ್‌ಗಳು, ಒಂದು ಪಿಸ್ತೂಲ್, ಎರಡು ಮ್ಯಾಗಜೀನ್‌ಗಳು, ಆರು ಗ್ರೆನೇಡ್‌ಗಳು ಇದ್ದು ಎಲ್ಲವನ್ನು ವಶಪಡಿಸಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!