ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಶ್ಮೀರದಲ್ಲಿರುವ ಖೀರ್ಭವಾನಿ ದೇವಸ್ಥಾನದ ಬಳಿ ಮುಸ್ಲಿಂ ವ್ಯಕ್ತಿಯೊಬ್ಬ ಭಗವಾನ್ ವಿಷ್ಣುವಿನ ಫೋಟೋಗೆ ಮುತ್ತಿಟ್ಟಿದ್ದಾನೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆದಿತ್ಯ ರಾಜ್ ಎಂಬುವವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಇದನ್ನು ಪೋಸ್ಟ್ ಮಾಡಿದ್ದಾರೆ. ಇಂದು ಮುಂಜಾನೆ ಕಾಶ್ಮೀರದಲ್ಲಿ ಖೀರ್ಭವಾನಿ ದೇವಸ್ಥಾನಕ್ಕೆ ಭೇಟಿ ನೀಡದಾಗ ಅಲ್ಲಿ ಒಬ್ಬ ಮುಸ್ಲಿಂ, ಹಿಂದೂ ದೇವರಾದ ವಿಷ್ಣುವಿನ ಚಿತ್ರಕ್ಕೆ ಪ್ರೀತಿಯಿಂದ ಮುತ್ತಿಟ್ಟಿದ್ದಾನೆ.
ಈ ಹಿಂದೆಯೂ ನಾನು ಒಮ್ಮೆ ಈ ದೇವಸ್ಥಾನಕ್ಕೆ ಭೇಟಿ ನೀಡಿದ್ದೆ, ಆಗ ಇಬ್ಬರು ಮುಸ್ಲಿಂ ಮಹಿಳೆಯರು ದೇವಸ್ಥಾನದ ಒಳಗೆ ಪ್ರಾರ್ಥನೆ ಸಲ್ಲಿಸುತ್ತಿರುವುದನ್ನ ನೋಡಿದ ನನಗೆ ನಿಜಕ್ಕೂ ಆಶ್ಚರ್ಯವಾಯಿತು ಎಂದು ಬರೆದುಕೊಂಡಿದ್ದಾರೆ.
Kheerbhawani Temple earlier today in Kashmir. A local Muslim kisses photograph of Lord Vishu. During my visit last year to Kheerbhawani, I was surprised to see two local Muslim ladies pray inside the temple. And today my local doctor friend went to pay respects early morning. pic.twitter.com/yeSED3VH7L
— Aditya Raj Kaul (@AdityaRajKaul) June 8, 2022