ಹೊಸದಿಗಂತ ಡಿಜಿಟಲ್ ಡೆಸ್ಕ್:
ರಣಜಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಾರ್ಖಂಡ್ ವಿರುದ್ಧ ಪಶ್ಚಿಮ ಬಂಗಾಳ ಬ್ಯಾಟರ್ ಮನೋಜ್ ತಿವಾರಿ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಎರಡನೇ ಇನ್ನಿಂಗ್ಸ್ನಲ್ಲಿ ಶತಕ ಬಾರಿಸಿದರು.
ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದ್ದು, ಮೊದಲ ಇನ್ನಿಂಗ್ಸ್ನಲ್ಲಿ ಮುನ್ನಡೆ ಪಡೆದುಕೊಂಡ ಕಾರಣ ಪ.ಬಂಗಾಳ ಸೆಮಿಫೈನಲ್ ಪ್ರವೇಶಿಸಿದೆ.
ಪಶ್ಚಿಮ ಬಂಗಾಳ ಸರಕಾರದ ಕ್ರೀಡಾ ಸಚಿವರಾಗಿರುವ ಇವರು , ರಾಜಕೀಯ ಪ್ರವೇಶಿಸಿದ ಬಳಿಕದ ಮೊದಲ ಶತಕ. ಈ ಹಿಂದೆ 2019-20ರ ಸಾಲಿನಲ್ಲಿ ಹೈದರಾಬಾದ್ ವಿರುದ್ಧದ ಇವರು ಅಜೇಯ 303 ರನ್ಗಳಿಕೆ ಮಾಡಿದ್ದರು.
ಮನೋಜ್ ತಿವಾರಿ ಟೀಂ ಇಂಡಿಯಾ ಪರ 12 ಏಕದಿನ ಮತ್ತು 3 ಟಿ20 ಪಂದ್ಯಗಳನ್ನಾಡಿದ್ದಾರೆ. 125 ಪ್ರಥಮ ದರ್ಜೆ ಮತ್ತು 163 ಲಿಸ್ಟ್ ಎ ಪಂದ್ಯಗಳನ್ನೂ ಆಡಿದ್ದು, ದೇಶೀಯ ಕ್ರಿಕೆಟ್ನಲ್ಲಿ 14,000 ರನ್ಗಳಿಸಿದ್ದಾರೆ.
ಕಳೆದ ವರ್ಷದ ಪ.ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ತಿವಾರಿ, ಟಿಎಂಸಿ ಪಕ್ಷದಿಂದ ಗೆಲುವು ಸಾಧಿಸಿ ಇದೀಗ ಕ್ರೀಡೆ ಮತ್ತು ಯುವ ವ್ಯವಹಾರಗಳ ಸಚಿವರಾಗಿದ್ದಾರೆ.