ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಮೂರನೇ ಅಭ್ಯರ್ಥಿ ಗೆಲ್ಲಲು ಜೆಡಿಎಸ್ ಕಾರಣವೇ ಹೊರತು ಕಾಂಗ್ರೆಸ್ ಅಲ್ಲ: ಸಿದ್ದರಾಮಯ್ಯ

ಹೊಸ ದಿಗಂತ ವರದಿ, ಮೈಸೂರು:

ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಮೂರನೇ ಅಭ್ಯರ್ಥಿ ಗೆಲ್ಲಲು ಜೆಡಿಎಸ್ ಕಾರಣವೇ ಹೊರತು ಕಾಂಗ್ರೆಸ್ ಅಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಜೆಡಿಎಸ್‌ನ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆರೋಪಕ್ಕೆ ತಿರುಗೇಟು ನೀಡಿದರು.
ಶನಿವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಜೊತೆ ಅಂದು ಮೈತ್ರಿ ಮಾಡಿಕೊಂಡು ಕೆಟ್ಟವು. ಪಾರ್ಲಿಮೆಂಟ್ ಎಲೆಕ್ಷನ್ ನಲ್ಲಿ ಜೆಡಿಎಸ್ ಜೊತೆ ಹೊಗಿದ್ದಕ್ಕೆ ಕೆಟ್ಟಿದ್ದು, ಈಗ ರಾಜ್ಯ ಸಭಾ ಚುನಾವಣೆಯಲ್ಲೂ ಮೈತ್ರಿ ಮಾಡಿಕೊಂಡು ಮತ್ತೆ ಕೆಟ್ಟೆವು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯಸಭೆಯಲ್ಲಿ ಬಿಜೆಪಿ ಗೆಲ್ಲೋದಕ್ಕೆ ಸಿದ್ದರಾಮಯ್ಯ ಕಾರಣ ಎಂದು ಜೆಡಿಎಸ್ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ, ಬಿಜೆಪಿ ಗೆಲ್ಲಲು ಅವರು ಕಾರಣ ಅಲ್ವಾ.? ಮೊದಲು ನಾವು ಅಭ್ಯರ್ಥಿ ಹಾಕಿದ್ದು, ಆ ನಂತರ ಅವರು ಅಭ್ಯರ್ಥಿ ಹಾಕಿದ್ದು. ಬಿಜೆಪಿ ಗೆಲ್ಲಬಾರದಿತ್ತು ಅನ್ನೋದಿದ್ರೆ ಅವರು ಕ್ಯಾಂಡೆಟ್ ಹಾಕಬಾರದಿತ್ತು. ಹೆಚ್.ಡಿ. ದೇವೇಗೌಡರು ನಿಂತಾಗ ನಾವು ಕ್ಯಾಂಡಿಡೇಟ್ ಹಾಕಿದ್ವಾ.? ಇಲ್ಲ ತಾನೇ, ಅದೇ ರೀತಿ ಅವರು ಮಾಡಬೇಕಿತ್ತು. ಅವರು ಮುಖ್ಯಮಂತ್ರಿ ಆಗೋಕೆ ನಾವು ಸಪೋರ್ಟ್ ಮಾಡಿರ್ಲಿಲ್ವ. ನಾವು ಈ ಬಾರಿ ಅಲ್ಪಸಂಖ್ಯಾತ ಅಭ್ಯರ್ಥಿ ಹಾಕಿದ್ದವು ಬಿಜೆಪಿ ಗೆಲ್ಲಬಾರದು ಅನ್ನೊದಾಗಿದ್ರೆ ನಮಗೆ ಸಪೋರ್ಟ್ ಮಾಡಬೇಕಿತ್ತು. ಬಿಜೆಪಿ ಗೆಲ್ಲಲು ಅವರೇ ನೇರ ಕಾರಣ ಎಂದು ಗುಡುಗಿದರು.
ವಿರಾಮವಾಗಿ ನಾಟಕ ವೀಕ್ಷಿಸಿದ ಸಿದ್ದರಾಮಯ್ಯ;
ರಾಜ್ಯಸಭಾ ಚುನಾವಣೆಯ ಗುಂಗಿನಿAದ ಹೊರಬಂದಿದ್ದರೂ, ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಗೆ ಕೇವಲ ಇನ್ನೇರಡು ದಿನಗಳು ಬಾಕಿಯಿದ್ದರೂ, ಆ ಬಗ್ಗೆ ಹೆಚ್ಚೇನು ತಲೆ ಕೆಡಿಸಿಕೊಳ್ಳದ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿಗೆ ಆಗಮಿಸಿ ಕುರುಕ್ಷೇತ್ರದ ನಾಟಕವನ್ನು ವೀಕ್ಷಿಸಿದರು. ಬೆಂಗಳೂರಿನಿAದ ನೇರವಾಗಿ ಮೈಸೂರಿನ ಹುಣಸೂರು ರಸ್ತೆಯಲ್ಲಿರುವ ಕಲಾಮಂದಿರಕ್ಕೆ ಆಗಮಿಸಿದ ಸಿದ್ದರಾಮಯ್ಯ ವಕೀಲರ ಸಂಘದವರು ಏರ್ಪಡಿಸಿದ್ದ ಕುರುಕ್ಷೇತ್ರದ ನಾಟಕವನ್ನು ವೀಕ್ಷಿಸಿದರು. ಮುಖಂಡರು,ವಕೀಲರೊAದಿಗೆ ಸಂತೋಷದಿAದ ಕುಳಿತುಕೊಂಡು ಕುರುಕ್ಷೇತ್ರದ ಅರ್ಜುನ,ಭೀಮ,ದ್ರೌಪದಿ ಅಭಿನಯಸಿದ ನಾಟಕದ ತುಣುಕಗಳನ್ನು ವೀಕ್ಷಿಸಿದರು. ನಂತರ,ವಕೀಲರ ಸಂಘದವರ ಸನ್ಮಾನ ಸ್ವೀಕರಿಸಿದ ಬಳಿಕವೂ ಒಂದಿಷ್ಟು ಹೊತ್ತು ಕುಳಿತು ವೀಕ್ಷಣೆ ಮಾಡಿ ಸಂಭ್ರಮಿಸಿದರು. ಸಂಘದವರು ಹಲವು ಬಾರಿ ಮನವಿ ಮಾಡಿದರೂ ಭಾಷಣ ಮಾಡದೆ ಖುಷಿಯಾಗಿ ನಾಟಕ ನೋಡುವ ಕಡೆಗೆ ಗಮನಹರಿಸಿದ್ದು ಕಂಡುಬAದಿತು. ಈ ಸಂದರ್ಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, ವಕೀಲರ ಸಂಘದವರು ಆಹ್ವಾನ ಕೊಟ್ಟಿದ್ದರು. ಹಾಗಾಗಿ, ಕುರುಕ್ಷೇತ್ರ ನಾಟಕ ವೀಕ್ಷಿಸಿದೇನೆ. ಬಹಳ ಖುಷಿಯಾಯಿತು. ಹಿಂದೆ ಲಾಯರ್ ಆಗಿದ್ದಾಗ ಎಲ್ಲಾಕಡೆ ಹೋಗಿ ನಾಟಕ ನೋಡುತ್ತಿದ್ದೆ. ನಾನು ಲಾ ಕಾಲೇಜಿನಲ್ಲಿ ಸಾಮಾಜಿಕ ನಾಟಕ ಮಾಡಿದ್ದೆ. ಯಮಧರ್ಮರಾಯನ ಸನ್ನಿಧಿ ಎಂಬ ನಾಟಕದಲ್ಲಿ ವೈದ್ಯನ ಪಾತ್ರ ಮಾಡಿದ್ದೆ. ಅದಕ್ಕೆ ನಾನು ಡಾಕ್ಟರ್ ಆಗಲಿಲ್ಲ ಎಂದರು. ಪೌರಾಣಿಕ ನಾಟಕಗಳಿಂದಲೇ ಡಾ.ರಾಜ್‌ಕುಮಾರ್, ಎನ್.ಟಿ.ರಾಮರಾವ್ ಅವರಂತಹವರು ದೊಡ್ಡ ದೊಡ್ಡ ಕಲಾವಿದರಾದರು. ಇತ್ತೀಚೆಗೆ ಪೌರಾಣಿಕ ನಾಟಕಗಳನ್ನು ಅಭಿನಯಿಸುವುದು ಮತ್ತು ನೋಡುವ ಆಸಕ್ತಿ ಕಡಿಮೆಯಾಗಿದೆ. ಆಸಕ್ತಿ ಬರುವ ಹಾಗೆ ಮಾಡಬೇಕು. ಈಗ ವಕೀಲರ ಸಂಘದವರು ಪ್ರಾಕ್ಟೀಸ್‌ಮಾಡಿ ನಾಟಕಮಾಡಿದ್ದಾರೆ. ಅದೇ ರೀತಿ ಎಲ್ಲರೂ ನಾಟಕ ಮಾಡುವ ಕಡೆಗೆ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!