ಹೊಸದಿಗಂತ ಡಿಜಿಟಲ್ ಡೆಸ್ಕ್:
ರಕ್ತದಲ್ಲಿನ ಪ್ಲೇಟ್‌ಲೆಟ್‌ಗಳು ದೇಹಕ್ಕೆ ಬಹಳ ಮುಖ್ಯ. ಅವುಗಳ ಸಂಖ್ಯೆ ಕಡಿಮೆಯಾಗುತ್ತಿದೆ ಅಂದರೆ ಮಾನವನ ಜೀವಕ್ಕೆ ಅಪಾಯವಿದೆ ಅಂತಲೇ ಅರ್ಥ. ಡೆಂಗ್ಯೂ ಮುಂತಾದ ಕಾಯಿಲೆ ವಕ್ಕರಿಸಿದಾಗ ಸ್ವಾಭಾವಿಕವಾಗಿ ಪ್ಲೇಟ್‌ಲ್ಟ್‌ಗಳ ಸಂಖ್ಯೆ ಕಡಿಮೆಯಾಗುತ್ತದೆ. ಈ ಹಂತದಲ್ಲಿ ನೀವು ಎಷ್ಟೇ ಅಜಾಗರೂಕತೆಯಿಂದ ವರ್ತಿಸಿದರೂ, ನೀವು ಸಾವಿನ ಹಂತವನ್ನು ತಲುಪುತ್ತೀರಿ. ಸಾಮಾನ್ಯವಾಗಿ ರಕ್ತದಲ್ಲಿ 1,50,000 ರಿಂದ 4.50,000 ಪ್ಲೇಟ್‌ಲೆಟ್‌ಗಳನ್ನು ಹೊಂದಿರುತ್ತದೆ. ದೇಹದಲ್ಲಿ ಈ ಪ್ಲೇಟ್‌ಲೆಟ್‌ಗಳ ಜೀವಿತಾವಧಿ 5 ರಿಂದ 9 ದಿನಗಳು. ಇಂತಹ ಪ್ಲೇಟ್‌ಲೆಟ್‌ಗಳು ಸಹಜವಾಗಿ ಅಭಿವೃದ್ದಿಯಾಗಲು ಸೇವಿಸಬೇಕಾದ ಆಹಾರದ ಬಗ್ಗೆ ಕೆಲ ಮಾಹಿತಿ ಇಲ್ಲಿದೆ.
ಪ್ಲೇಟ್‌ಲೆಟ್ ಹೆಚ್ಚಾಗಿರುವ ತರಕಾರಿ\ಹಣ್ಣುಗಳು
- ಪರಂಗಿ ಹಣ್ಣು- ಪಪ್ಪಾಯ ಮತ್ತು ಅದರ ಎಲೆಗಳು ಪ್ಲೇಟ್‌ಲೆಟ್‌ಗಳ ಸಂಖ್ಯೆಯನ್ನು ಹೆಚ್ಚಿಸಲು ತುಂಬಾ ಉಪಯುಕ್ತವಾಗಿದೆ. ಸಣ್ಣ ಪ್ರಮಾಣದಲ್ಲಿ ಪಪ್ಪಾಯಿ ಎಲೆಯ ರಸವನ್ನು ಕುಡಿಯುವುದರಿಂದ ಪ್ಲೇಟ್‌ಲೆಟ್‌ಗಳ ಸಂಖ್ಯೆಯನ್ನು ಹೆಚ್ಚಿಸಬಹುದು.
- ಬೆಳ್ಳುಳ್ಳಿ ನೈಸರ್ಗಿಕವಾಗಿ ಪ್ಲೇಟ್‌ಲೆಟ್‌ಗಳನ್ನು ಅಭಿವೃದ್ಧಿಪಡಿಸುವ ಗುಣವನ್ನು ಹೊಂದಿದೆ. ಬೆಳ್ಳುಳ್ಳಿಯನ್ನು ಆಹಾರದಲ್ಲಿ ಸೇರಿಸುವುದರಿಂದ ಪ್ಲೇಟ್‌ಲೆಟ್‌ಗಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಬಹುದು.
- ದೇಹದಲ್ಲಿ ಪ್ಲೇಟ್ಲೆಟ್ ಕಡಿಮೆಯಾದಾಗ ವಿಟಮಿನ್ ಕೆ ಸಮೃದ್ಧವಾಗಿರುವ ಸೊಪ್ಪನ್ನು ಸೇವಿಸುವುದು ಉತ್ತಮ.
- ದಾಳಿಂಬೆ ಹಣ್ಣು ಪ್ಲೇಟ್ಲೆಟ್ ಸಂಖ್ಯೆಯನ್ನು ಹೆಚ್ಚಿಸಲು ಉತ್ತಮ ಸಹಾಯಕವಾಗಿದೆ.
- ಕಬ್ಬಿಣದ ಅಂಶ ಹೆಚ್ಚಿರುವ ಇನ್ನೊಂದು ಹಣ್ಣು ಏಪ್ರಿಕಾಟ್. ದಿನಕ್ಕೆ ಎರಡು ಬಾರಿ ಏಪ್ರಿಕಾಟ್ ಹಣ್ಣು ತಿನ್ನುವುದರಿಂದ ಪ್ಲೇಟ್ಲೆಟ್ ಮಟ್ಟವನ್ನು ಹೆಚ್ಚಿಸಬಹುದು.
- ಒಣ ಖರ್ಜೂರದಲ್ಲಿ ಕಬ್ಬಿಣದ ಅಂಶ ಹಾಗೂ ಪೋಷಕಾಂಶಗಳು ಅಧಿಕ. ಅಷ್ಟೇ ಅಲ್ಲ, ಪ್ಲೇಟ್ ಲೆಟ್ ಹೆಚ್ಚಿಸುವ ಗುಣ ಅಧಿಕವಾಗಿದೆ.
- ಕ್ಯಾರೆಟ್ ಕೂಡ ಪ್ಲೇಟ್‌ಲೆಟ್‌ಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹಾಗಾಗಿ ವಾರಕ್ಕೆ ಎರಡು ಬಾರಿಯಾದರೂ ಕ್ಯಾರೆಟ್ ತಿನ್ನಲು ಪೌಷ್ಟಿಕತಜ್ಞರು ಶಿಫಾರಸು ಮಾಡುತ್ತಾರೆ.
- ಕಿವಿಫ್ರೂಟ್‌ನಲ್ಲೂ ಸೇವನೆ ಕೂಡ ಪ್ಲೇಟ್‌ಲೆಟ್ ಹೆಚ್ಚಿಸಲು ಉಪಕಾರಿ