ಅಗ್ನಿಪಥ್‌ ನೇಮಕಾತಿ ವಿವರಗಳನ್ನು ಬಿಡುಗಡೆ ಮಾಡಿದ ವಾಯುಸೇನೆ : ವಿವರದಲ್ಲೇನಿದೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಅಗ್ನಿಪಥ ಯೋಜನೆಯ ವಿರುದ್ಧ ವ್ಯಾಪಕ ಪ್ರತಿಭಟನೆ ನಡೆಯುತ್ತಿರುವ ಬೆನ್ನಲ್ಲೇ ಭಾರತೀಯ ವಾಯುಸೇನೆಯು ಅಗ್ನಿವೀರರ ನೇಮಕಾತಿನ ಕುರಿತಾದ ವಿವರಗಳನ್ನು ಬಿಡುಗಡೆ ಮಾಡಿದೆ. ಜೂ.24ರಿಂದ ಜಾರಿಗೆ ಬರಲಿರುವ ಈ ನೇಮಕಾತಿಯ ವಿವರದಲ್ಲಿ ಶೈಕ್ಷಣಿಕ ಅರ್ಹತೆ, ವೈದ್ಯಕೀಯ ಮಾನದಂಡಗಳು, ಮೌಲ್ಯಮಾಪನ, ರಜೆ, ಸಂಭಾವನೆ, ಜೀವ ವಿಮಾ ರಕ್ಷಣೆ ಇತ್ಯಾದಿಗಳನ್ನು ಇತರ ಹಲವು ಅಂಶಗಳನ್ನು ಒಳಗೊಂಡಿದೆ.

ವಾಯುಸೇನೆ ಬಿಡುಗಡೆ ಮಾಡಿರುವ ವಿವರಗಳು ಹೀಗಿವೆ:
⦁ ನಾಲ್ಕು ವರ್ಷದ ಅವಧಿಯಲ್ಲಿ IAF ಅಗ್ನಿವೀರ್‌ಗಳು ತಮ್ಮ ಸಮವಸ್ತ್ರದ ಮೇಲೆ ವಿಶಿಷ್ಟವಾದ ಚಿಹ್ನೆಯನ್ನು ಧರಿಸುತ್ತಾರೆ.ಅಗ್ನಿವೀರರು ಗೌರವ ಮತ್ತು ಪ್ರಶಸ್ತಿಗಳಿಗೆ ಅರ್ಹರಾಗಿರುತ್ತಾರೆ.
⦁ ಭಾರತೀಯ ವಾಯುಸೇನೆಯು ಅಗ್ನಿವೀರರ ಕೇಂದ್ರೀಕೃತ ಉನ್ನತ-ಗುಣಮಟ್ಟದ ಆನ್‌ಲೈನ್ ಡೇಟಾಬೇಸ್ ಅನ್ನು ನಿರ್ವಹಿಸುತ್ತದೆ. ಇದರಲ್ಲಿ ಅಗ್ನಿವೀರ್‌ಗಳು ಸಾಧಿಸಿದ ಕೌಶಲ್ಯಗಳನ್ನು ದಾಖಲಿಸಲಾಗುತ್ತದೆ ಮತ್ತು ಮೌಲ್ಯಮಾಪನ ಮಾಡಲಾಗುತ್ತದೆ.
⦁ ವಾಯುಪಡೆಯ ಅಗ್ನಿವೀರರಿಗೆ ವಾರ್ಷಿಕ 30 ರಜೆಗಳು ಹಾಗೂ ಅನಾರೋಗ್ಯ ರಜೆಗಳನ್ನು ಪಡೆಯಲಿದ್ದಾರೆ.
ಅಸಾಧಾರಣ ಸಂದರ್ಭಗಳನ್ನು ಹೊರತುಪಡಿಸಿ ನಾಲ್ಕು ವರ್ಷದ ಅವಧಿ ಪೂರ್ಣಗೊಳ್ಳುವವರೆಗೂ ಅಗ್ನಿವೀರ್‌ಗಳನ್ನು ಬಿಡುಗಡೆ ಮಾಡಲಾಗುವುದಿಲ್ಲ.

⦁ ಈ ಯೋಜನೆಯಡಿ ದಾಖಲಾದ ವ್ಯಕ್ತಿಗಳಿಗೆ ನಿಶ್ಚಿತ ವಾರ್ಷಿಕ ಇನ್‌ಕ್ರಿಮೆಂಟ್‌ನೊಂದಿಗೆ ತಿಂಗಳಿಗೆ ₹30,000 ಅಗ್ನಿವೀರ್ ಪ್ಯಾಕೇಜ್ ಅನ್ನು ಪಾವತಿಸಲಾಗುತ್ತದೆ. ಇದಲ್ಲದೆ, ಅಪಾಯ ಮತ್ತು ಕಷ್ಟ, ಉಡುಗೆ ಮತ್ತು ಪ್ರಯಾಣ ಭತ್ಯೆ ನೀಡಲಾಗುವುದು.


⦁ ಅಗ್ನಿವೀರರಿಗೆಂದೇ ಮೀಸಲು ಕಾರ್ಪಸ್‌ ಫಂಡ್‌ ಸ್ಥಾಪಿಸಲಾಗುತ್ತದೆ. ಪ್ರತಿಯೊಬ್ಬ ಅಗ್ನಿವೀರ್ ಈ ಆದಾಯದ 30% ಈ ನಿಧಿಗೆ ಹೋಗುತ್ತದೆ. ಜೊತೆಗೆ ಆ ನಿಧಿಗೆ ಸಮಾನವಾದ ಬಡ್ಡಿದರವನ್ನು ಸರ್ಕಾರ ನೀಡುತ್ತದೆ.
⦁ ನಾಲ್ಕು ವರ್ಷಗಳ ನಂತರ, ಅಗ್ನಿವೀರ್‌ಗಳು ಸೇವಾ ನಿಧಿ ಪ್ಯಾಕೇಜ್ ಅನ್ನು ಸ್ವೀಕರಿಸಲು ಅರ್ಹರಾಗುತ್ತಾರೆ, ಇದು ಕಾರ್ಪಸ್ ಫಂಡ್‌ಗೆ ಅವರ ಮಾಸಿಕ ಕೊಡುಗೆಯ ಒಟ್ಟು ಮೊತ್ತ ಮತ್ತು ಬಡ್ಡಿಯೊಂದಿಗೆ ಸರ್ಕಾರದ ಕೊಡುಗೆಯಾಗಿದೆ. ಇದಕ್ಕೆ ಆದಾಯ ತೆರಿಗೆಯಿಂದ ವಿನಾಯಿತಿ ದೊರೆಯಲಿದೆ. ನಾಲ್ಕು ವರ್ಷದ ಮೊದಲೇ ಹೊರಹೋಗುವ ಅಗ್ನಿವೀರರಿಗೆ ಸರ್ಕಾರದ ಮೀಸಲು ನಿಧಿ ಕೊಡುಗೆ ಸಿಗುವುದಿಲ್ಲ. ಅವರು ಕೇವಲ ಸ್ವಂತ ಗಳಿಕೆಯ ಮೀಸಲು ನಿಧಿಯನ್ನಷ್ಟೇ ಪಡೆಯಲಿದ್ದಾರೆ
⦁ ವಾಯುಸೇನೆ ಸೇರುವ ಅಗ್ನಿವೀರರಿಗೆ 48ಲಕ್ಷದ ಜೀವವಿಮೆ ಒದಗಿಸಲಾಗುತ್ತದೆ.
⦁ ನೇಮಕಾತಿ ಪ್ರಕ್ರಿಯೆಯು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೂ ಮುಕ್ತವಾಗಿರುವುದರಿಂದ, ದಾಖಲಾತಿ ಫಾರ್ಮ್‌ಗೆ ಅಪ್ರಾಪ್ತ ವಯಸ್ಕರ ಪೋಷಕರಿಂದ ಸಹಿ ಮಾಡಬೇಕಾಗುತ್ತದೆ. 18 ವರ್ಷ ಮೇಲ್ಪಟ್ಟ ವಯಸ್ಕರು ಯೋಜನೆಯ ಎಲ್ಲಾ ನಿಯಮಗಳು ಮತ್ತು ಷರತ್ತುಗಳನ್ನು ಔಪಚಾರಿಕವಾಗಿ ಒಪ್ಪಿಕೊಂಡು ಅಗ್ನಿವೀರ್‌ಗಳು ಡಾಕ್ಯುಮೆಂಟ್‌ಗೆ ಸಹಿ ಮಾಡಬೇಕು.
⦁ ನಾಲ್ಕು ವರ್ಷದ ನಂತರ ಅರ್ಹತೆಯ ಆಧಾರದ ಮೇಲೆ ವಾಯುಸೇನೆಗೆ ಸೇರಿಸಿಕೊಳ್ಳಲಾಗುತ್ತದೆ. ಹೊರಹೋಗುವ ಅಗ್ನಿವೀರರಿಗೆ ಸರ್ಕಾರ ಘೋಷಿಸಿರುವ ಇತರ ಮೀಸಲಾತಿ ಸೌಲಭ್ಯಗಳು ಸಿಗಲಿವೆ.
⦁ 17.5 ರಿಂದ 21 ವಯಸ್ಸಿನವರು ಅರ್ಜಿಸಲ್ಲಿಸಬಹುದಾಗಿದ್ದು ವಾಯುಸೇನೆ ನಿಗದಿಪಡಿಸಿದ ಶೈಕ್ಷಣಿಕ ಮತ್ತು ದೈಹಿಕ ಅರ್ಹತೆ ಹೊಂದಿರಬೇಕು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!