ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಯಾಂಡಲ್ವುಡ್ ಹಿರಿಯ ನಟಿ ಪವಿತ್ರಾ ಲೋಕೇಶ್, ಮಹೇಶ್ ಬಾಬು ಸಹೋದರ ರಮೇಶ್ ಅವರನ್ನು ಮೂರನೇ ಮದುವೆಯಾಗಿರುವ ಗಾಸಿಪ್ ಎಲ್ಲೆಡೆ ಹರಿದಾಡುತ್ತಿದೆ. ತೆಲುಗು ನಟ ನರೇಶ್ ಸೂಪರ್ ಸ್ಟಾರ್ ಕೃಷ್ಣ, ವಿಜಯ ನಿರ್ಮಲಾ (ಮೊದಲನೇ ಪತಿ ಕೃಷ್ಣ ಮೂರ್ತಿ)ಅವರ ಮಗ. ಈಗಾಗಲೇ ನರೇಶ್ಗೆ ಮೂರು ಮದುವೆಯಾಗಿದ್ದು, ಮೂವರೊಂದಿಗೆ ವಿಚ್ಛೇದನ ಪಡೆದು ಇದೀಗ ನಾಲ್ಕನೇ ಮದುವೆಯಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಇಬ್ಬರು ಹಲವು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಅಲ್ಲದೆ ನರೇಶ್ ಕುಟುಂಬದ ಶುಭ ಸಮಾರಂಭಗಳಲ್ಲೂ ಪವಿತ್ರಾ ಲೋಕೇಶ್ ಭಾಗಿಯಾಗಿದ್ದಾರೆ. ಕೆಲ ದಿನಗಳಿಂದ ಇವರಿಬ್ಬರು ಪ್ರೀತಿಸುತ್ತಿದ್ದು, ಲಿವ್ ಇನ್ ರಿಲೇಶನ್ ಶಿಪ್ ಮುಂದುವರಿಸುತ್ತಿದ್ದಾರೆ ಎಂಬ ಮಾತುಗಳು ಟಾಲಿವುಡ್ ನಲ್ಲಿ ಕೇಳಿ ಬರುತ್ತಿವೆ. ಇತ್ತೀಚೆಗಷ್ಟೇ ನರೇಶ್ ಮತ್ತು ಪವಿತ್ರಾ ಲೋಕೇಶ್ ಮಹಾಬಲೇಶ್ವರ ದೇವಸ್ಥಾನಕ್ಕೆ ತೆರಳಿ ಸ್ವಾಮೀಜಿ ಆಶೀರ್ವಾದ ಪಡೆದಿರುವುದು ಇನ್ನಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಮೇಲಾಗಿ ಸದ್ಯ ವೈರಲ್ ಆಗುತ್ತಿರುವ ಸುದ್ದಿಯನ್ನು ಇವರಿಬ್ಬರೂ ಅಲ್ಲಗಳೆಯದೇ ಇರುವುದು ಹಾಟ್ ಟಾಪಿಕ್ ಆಗಿ ಪರಿಣಮಿಸಿದೆ.