ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಕಾಗುವ ಪದಾರ್ಥಗಳು:
1 ಕಪ್ ಅಕ್ಕಿ ಹಿಟ್ಟು
1/2 ಕಡ್ಲೆ ಹಿಟ್ಟು
1 ಟೀಸ್ಪೂನ್ ಎಳ್ಳು
1/2 ಟೀಸ್ಪೂನ್ ಪುಡಿಮಾಡಿದ ಜೀರಿಗೆ
ಅರಿಶಿನ ಪುಡಿಯ ದೊಡ್ಡ ಚಿಟಿಕೆ
ಒಂದು ಚಿಟಿಕೆ ಇಂಗು
1/2 – 1 ಟೀಸ್ಪೂನ್ ಕೆಂಪು ಮೆಣಸಿನ ಪುಡಿ
1 ಟೀಸ್ಪೂನ್ ಉಪ್ಪು (ಅಥವಾ ರುಚಿಗೆ ತಕ್ಕಂತೆ)
1 ಚಮಚ ಬೆಣ್ಣೆ (ಅಥವಾ 2 ಚಮಚ ಬಿಸಿ ಎಣ್ಣೆ)
ಡೀಪ್ ಫ್ರೈ ಮಾಡಲು ಎಣ್ಣೆ
ಮಾಡುವ ವಿಧಾನ:
ಒಂದು ಬಟ್ಟಲಿಗೆ ಅಕ್ಕಿಹಿಟ್ಟು, ಕಡಲೆಹಿಟ್ಟು, ಎಳ್ಳು, ಜೀರಿಗೆ, ಅರಿಶಿನ, ಮೆಣಸಿನ ಪುಡಿ, ಉಪ್ಪು, ಬೆಣ್ಣೆ ಎಲ್ಲವನ್ನು ಹಕಿ ಚೆನ್ನಾಗಿ ಮಿಶ್ರಣ ಮಾಡಿ. ಉಗುರು ಬೆಚ್ಚಗಿನ ನೀರಿನಿಂದ ಹದವಾಗಿ ಕಲಿಸಿಟ್ಟುಕೊಂಡು ಮಿಶ್ರಣವನ್ನು ಚಕ್ಕುಲಿ ವೊಳ್ಳಿನಲ್ಲಿರುವ ಉದ್ದವಾದ ತೂತಿನ ಬಿಲ್ಲೆ ತೆಗೆದುಕೊಂಡು ಎಣ್ಣೆ ಸವರಿ ಈ ಮಿಶ್ರಣವನ್ನು ಅದರಲ್ಲಿಡಿ. ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಕಾದ ಬಳಿಕ ಇದನ್ನು ಎಣ್ಣೆಯೊಳಗೆ ಒತ್ತಿ ಕರಿಯಿರಿ. ಸಂಜೆ ಟೀ ಟೈಂಗೆ ಸವಿಯಲು ರುಚಿಕರವಾದ ಸ್ನಾಕ್ಸ್ ಸಿದ್ದ.