ಮೇಷ.
ಪ್ರಗತಿಪರ ದಿನ. ದೃಢಚಿತ್ತದಿಂದ ಕೆಲಸ ನಿರ್ವಹಿಸಿ. ಉತ್ತಮ ಫಲ ಖಂಡಿತ. ಆರ್ಥಿಕ ಸ್ಥಿತಿ ತೃಪ್ತಿಕರ. ದಂಪತಿ ಮಧ್ಯೆ ವಿರಸ ಉಂಟಾದೀತು.
ವೃಷಭ
ಗ್ರಹಗತಿ ಒಳಿತನ್ನು ಸೂಚಿಸುತ್ತಿದೆ. ವೃತ್ತಿಯಲ್ಲಿ ಉನ್ನತಿ. ನಿರುದ್ಯೋಗಿಗಳಿಗೆ ಶುಭ ಬೆಳವಣಿಗೆ. ಪ್ರೀತಿ, ಸ್ನೇಹದಲ್ಲಿ ವಿರಸ ಮಾಯ, ಸಮರಸತೆ ಬೆಳೆಯಲಿದೆ.
ಮಿಥುನ
ಎಂದಿಗಿಂತ ಹೆಚ್ಚೇ ಕೆಲಸದ ಒತ್ತಡ. ಸಹಚರರ ಜತೆ ಸಂಘರ್ಷ. ಹಣಕ್ಕೆ ಸಂಬಂಽಸಿ ಪ್ರಮುಖ ನಿರ್ಧಾರ ತಾಳದಿರಿ. ಕಾದು ನೋಡುವುದೊಳಿತು.
ಕಟಕ
ಆರ್ಥಿಕ ಲಾಭ. ಉದ್ಯಮದಲ್ಲಿ ಯಶಸ್ಸು. ಬಸುರಿಯರು ಆರೋಗ್ಯದ ಕಡೆ ಹೆಚ್ಚು ಗಮನ ಕೊಡಿ. ಕೌಟುಂಬಿಕ ಸಾಮರಸ್ಯ.
ಸಿಂಹ
ಸಂಬಂಧದಲ್ಲಿ ಪ್ರಾಮಾಣಿಕವಾಗಿ ವರ್ತಿಸಿ. ಬೇಕಾಬಿಟ್ಟಿ ಧೋರಣೆ ಪ್ರತಿಕೂಲ ಪರಿಣಾಮ ಉಂಟು ಮಾಡೀತು. ಹೊಂದಾಣಿಕೆ ಮುಖ್ಯ.
ಕನ್ಯಾ
ನೀವು ನಿರೀಕ್ಷಿಸಿದ ರೀತಿಯಲ್ಲಿ ದಿನ ಸಾಗದು. ಬಯಸದ ಬೆಳವಣಿಗೆ ಉಂಟಾದೀತು. ನಿಮ್ಮ ಮನಸ್ಸು ಕೆಡಿಸುವ ವ್ಯಕ್ತಿಗಳನ್ನು ದೂರವಿಡಿ.
ತುಲಾ
ನಿರಾಳ ದಿನ. ಮುಖ್ಯ ಕೆಲಸವನ್ನು ಬಹುತೇಕ ನೆರವೇರಿಸಿದ ಸಮಾಧಾನ. ಉದ್ಯಮದಲ್ಲಿ ಪ್ರಗತಿ. ಆರೋಗ್ಯ ಸುಸ್ಥಿರ. ಬಂಧುಮಿತ್ರರ ಸಹಕಾರ.
ವೃಶ್ಚಿಕ
ವೃತ್ತಿಯಲ್ಲಿ ಎಲ್ಲವೂ ಉತ್ತಮವಾಗಿ ಸಾಗಲಿದೆ. ಆದರೆ ಕೌಟುಂಬಿಕ ಬದುಕಲ್ಲಿ ಏರುಪೇರು ಎದುರಿಸುವಿರಿ. ಅತಿರೇಕ ವಾಗಿ ವರ್ತಿಸದಿರಿ.
ಧನು
ವೃತ್ತಿ ಮತ್ತು ಖಾಸಗಿ ಬದುಕಲ್ಲಿ ಹೊಂದಾಣಿಕೆಯ ಕೊರತೆ. ಎರಡನ್ನೂ ಸಮಾನವಾಗಿ ಸ್ವೀಕರಿಸಿ. ಯಾವುದನ್ನೂ ಕಡೆಗಣಿಸಬೇಡಿ.
ಮಕರ
ಕೆಲವು ದಿನಗಳ ಕಠಿಣ ಶ್ರಮವು ಕೊನೆಗೂ ಫಲ ನೀಡಲಿದೆ. ತೃಪ್ತಿ ಅನುಭವಿಸುವಿರಿ. ಸಾಂಸಾರಿಕ ಬಿಕ್ಕಟ್ಟು ಉಂಟಾದೀತು.
ಕುಂಭ
ಸಂತೋಷ ಹೆಚ್ಚಿಸುವ ದಿನ. ಅದೃಷ್ಟ ನಿಮ್ಮ ಜತೆಗಿದೆ. ಕಾಡುತ್ತಿದ್ದ ಸಮಸ್ಯೆ ಪರಿಹಾರ. ಆಪ್ತರ ಜತೆಗಿನ ಭಿನ್ನಮತ ನಿವಾರಣೆ.
ಮೀನ
ಎಲ್ಲರ ಮಾತೂ ಕೇಳುತ್ತಾ ಹೋದರೆ ನಿಮ್ಮ ಒತ್ತಡ ಹೆಚ್ಚಲಿದೆ. ನೀವೇ ವಿವೇಕಯುತವಾಗಿ ಯೋಚಿಸಿ. ದಂಪತಿ ಮಧ್ಯೆ ವಾಗ್ವಾದ ಸಂಭವ.
ದಿನಭವಿಷ್ಯ: ದೃಢಚಿತ್ತದಿಂದ ಕೆಲಸ ನಿರ್ವಹಿಸಿ, ಉತ್ತಮ ಫಲ ಖಂಡಿತ

