ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಣ್ಣೆ ಅಮಲಿನಲ್ಲಿದ್ದ ಮದುಮಗ ಮಧುವಿಗೆ ಹೂ ಹಾರ ಹಾಕುವ ಬದಲು ಆಕೆಯ ಅತ್ತಿಗೆಯ ಕುತ್ತಿಗೆಗೆ ಹಾರ ಹಾಕಿ ಕಪಾಳಮೋಕ್ಷ ಮಾಡಿಸಿಕೊಂಡ ವಿಲಕ್ಷಣ ಘಟನೆ ಉತ್ತರ ಪ್ರದೇಶದ ಹಮೀರ್ಪುರದಲ್ಲಿ ನಡೆದಿದೆ.
ಮದುವೆ ಸಂಭ್ರಮದಲ್ಲಿ ಮೈಮರೆತು ಕಂಠಪೂರ್ತಿ ಕುಡಿದಿದ್ದ ವರ ಮಹಾಶಯ ತೂರಾಡುತ್ತಲೇ ಮದುವೆ ಮಂಟಪಕ್ಕೆ ಬಂದಿದ್ದ. ಮದುವೆ ಸಲಯವಾಗುತ್ತಿದ್ದುದರಿಂದ ಬೇರೇನೂ ಉಪಾಯ ಕಾಣದೆ ಆತನನ್ನು ವ್ಯಕ್ತಿಯೊಬ್ಬ ಹಿಂದಿನಿಂದ ಹಿಡಿದುಕೊಂಡೇ ಮದುವೆ ಶಾಸ್ತ್ರ ಆರಂಭವಾಗಿತ್ತು. ಈ ವೇಳೆ ವಧು ವರನ ಕುತ್ತಿಗೆಗೆ ಹಾರ ಹಾಕಿದ್ದಾಳೆ. ಬಳಿಕ ವರನಲ್ಲಿ ವಧುವಿನ ಕುತ್ತಿಗೆಗೆ ಹಾರ ಹಾಕುವಂತೆ ಹಿರಿಯರು ಸೂಚಿಸಿದ್ದಾರೆ. ವರ, ವಧುವಿನ ಬದಲಾಗಿ ಆಕೆಯ ಅತ್ತಿಗೆಯ ಕುತ್ತಿಗೆಗೆ ಹಾರ ಹಾಕಿಯೇಬಿಟ್ಟಿದ್ದಾನೆ. ಸಿಟ್ಟು ನೆತ್ತಿಗೇರಿ ಅತ್ತಿಗೆ ಒಂದಲ್ಲ ಎರಡು ಬಾರಿ ವರನಿಗೆ ಕಪಾಳಕ್ಕೆ ಬಾರಿಸಿ ಎಣ್ಣೆಯ ನಶೆ ಇಳಿಸಿದ್ದಾಳೆ.
ವಧುವಿನ ಬದಲಾಗಿ ಕುಡಿದ ವರ ವಧುವಿನ ಅತ್ತಿಗೆಯ ಕುತ್ತಿಗೆಗೆ ಹಾರ ಹಾಕುತ್ತಿರುವ ವೀಡಿಯೋ ಸದ್ಯ ವೈರಲ್ ಲಿಸ್ಟ್ನಲ್ಲಿದೆ!
बिहार में शराबबंदी बा … 🤔😅🤣😂🥃 pic.twitter.com/MiWYfF2N2T
— Vikki1975 (@Vikki19751) June 21, 2022