ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಬ್ಬರು ವಿಕೃತ ಮನಸ್ಸಿನ ಯುವಕರು ಶಿವಲಿಂಗಕ್ಕೆ ಬಿಯರ್ ಅಭಿಷೇಕ ಮಾಡುತ್ತಿರುವ ವೀಡಿಯೋವೊಂದು ವೈರಲ್ ಆಗಿದೆ. ಬಿಯರ್ ಸುರಿಯುತ್ತಿರುವಾಗ ಹಿನ್ನೆಲೆಯಲ್ಲಿ “ಭೋಲೇ ಬಾಬಾ” ಹಾಡು ಪ್ಲೇ ಆಗುತ್ತಿದೆ ಎನ್ನಲಾಗಿದ್ದು ಈ ದುಷ್ಕೃತ್ಯ ಚಂಡೀಗಢದಲ್ಲಿ ನಡೆದಿದೆ.
ನೀರಿನ ಕಾಲುವೆಯೊಂದರ ದಡದ ಮೇಲಿರುವ ಶಿವಲಿಂಗಕ್ಕೆ ಒಬ್ಬ ಟಿನ್ ನಲ್ಲಿರುವ ಬಿಯರ್ ಸುರಿಯುತ್ತಿದ್ದರೆ ಇನ್ನೊಬ್ಬ ಅವನ ಪಕ್ಕದಲ್ಲಿ ಕುಳಿತು ಕುಡಿಯುತ್ತಿದ್ದಾನೆ. ಇಬ್ಬರೂ ಶೂ ಧರಿಸಿರುವುದು ಕಂಡುಬಂದಿದ್ದು ಅವರ ಸಹಚರನೊಬ್ಬ ಈ ವೀಡಿಯೋ ಚಿತ್ರೀಕರಿಸಿದ್ದಾನೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ ಎಂದು ದೈನಿಕ್ ಭಾಸ್ಕರ್ ವರದಿ ಮಾಡಿದೆ.
ಇದನ್ನು ಹಿಂದುಪರ ಸಂಘಟನೆಗಳು ತೀವ್ರವಾಗಿ ಖಂಡಿಸಿದ್ದು ಆರೋಪಿಗಳನ್ನು ಬಂಧಿಸುವಂತೆ ಭಜರಂಗದಳ ಮತ್ತು ಬಿಜೆಪಿ ಕಾರ್ಯಕರ್ತರು ಐಟಿ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ಧಾರೆ. ಯುವಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಭಜರಂಗದಳ ಹೇಳಿದೆ.