ಜನತೆಗೆ ಸರ್ಕಾರದ ‘ಶಾಕ್’: ಯೂನಿಟ್ ವಿದ್ಯುತ್‌ಗೆ 50 ಪೈಸೆ ಏರಿಕೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳ ರಾಜ್ಯ ಸರ್ಕಾರವು ವಿದ್ಯುತ್ ಗ್ರಾಹಕರಿಗೆ ನಾಳೆ ‘ಶಾಕ್’ ನೀಡಲಿದೆ!
ನಾಳೆಯಿಂದ ವಿದ್ಯುತ್ ಬಳಕೆಯ ಪ್ರತಿ ಯೂನಿಟ್‌ಗೆ 15 ರಿಂದ 50 ಪೈಸೆಯಷ್ಟು ಏರಿಕೆಯಾಗಲಿದ್ದು, ಪರಿಷ್ಕೃತ ದರವನ್ನು ನಿಯಂತ್ರಣ ಆಯೋಗ ಶನಿವಾರ ಮಧ್ಯಾಹ್ನ ಪ್ರಕಟಿಸಲಿದೆ ಎಂದು ವಿದ್ಯುತ್ ಸಚಿವ ಕೆ.ಕೃಷ್ಣನ್ ಕುಟ್ಟಿ ತಿಳಿಸಿದ್ದಾರೆ.
ಪ್ರಸ್ತುತ ಗೃಹ ಬಳಕೆ ವಿದ್ಯುತ್‌ಗೆ ೪.೭೯ ರೂ. ದರವಿದೆ.  ನಿಯಂತ್ರಣ ಆಯೋಗವು ದರವನ್ನು ಶೇ.5ರಿಂದ 10ರಷ್ಟು ಹೆಚ್ಚಿಸಲು ನಿರ್ಧರಿಸಿದೆ. ಏಪ್ರಿಲ್‌ನಲ್ಲಿ ವಿದ್ಯುತ್ ದರ ಏರಿಕೆಯಾಗಬೇಕಿತ್ತಾದರೂ, ಕೋವಿಡ್‌ನಿಂದಾಗಿ ಪರಿಸ್ಥಿತಿ ಹದೆಗೆಟ್ಟಿದ್ದರಿಂದ ವಿದ್ಯುತ್ ದರ ಹೆಚ್ಚಳವಾಗಿರಲಿಲ್ಲ. ವಿದ್ಯುತ್ ದರವನ್ನು ಹೆಚ್ಚಿಸುವ ಅಧಿಕಾರ ನಿಯಂತ್ರಣ ಆಯೋಗ ಹೊಂದಿದ್ದು, ನಾಳೆ ಘೋಷಿಸಲಾಗುವ ಹೊಸ ದರಗಳು ಜುಲೈನಿಂದ ಜಾರಿಗೆ ಬರಲಿವೆ.
ರಾಜ್ಯ ಸರ್ಕಾರವು ಸಾಧ್ಯವಾದಷ್ಟು ವಿದ್ಯುತ್ ದರವನ್ನು ಹೊರೆಯಾಗದಂತೆ ಪ್ರಯತ್ನಿಸಿದೆ ಎಂದು ಕೃಷ್ಣನ್ ಕುಟ್ಟಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!