ಹೊಸದಿಗಂತ ಡಿಜಿಟಲ್ ಡೆಸ್ಕ್:
ರಿಲಯನ್ಸ್ ಜಿಯೋ ನಿರ್ದೇಶಕ ಸ್ಥಾನದಿಂದ ಮುಖೇಶ್ ಅಂಬಾನಿ ಕೆಳಗಿಳಿದು ತಮ್ಮ ಪುತ್ರ ಆಕಾಶ್ ಅಂಬಾನಿ ಅವರನ್ನು ಸಂಸ್ಥೆಯ ನೂತನ ಅಧ್ಯಕ್ಷರಾಗಿ ನೇಮಿಸಿದ್ದಾರೆ. ಇದೀಗ ಪುತ್ರಿ ಇಶಾ ಅಂಬಾನಿಗೂ ಮಹತ್ವದ ಸ್ಥಾನ ನೀಡಿದ್ದಾರೆ.
ಇಶಾ ಅಂಬಾನಿಗೆ ರಿಲಯನ್ಸ್ ಇಂಡಸ್ಟ್ರೀಸ್ನ ರಿಟೇಲ್ ವಿಭಾಗದ ಉಸ್ತುವಾರಿ ನೀಡಲಾಗಿದೆ. ಪ್ರಸ್ತುತ ಇವರು ರಿಲಯನ್ಸ್ ರಿಟೇಲ್ ವೆಂಚರ್ನ ನಿರ್ದೇಶಕಿಯಾಗಿದ್ದಾರೆ.
30 ವರ್ಷದ ಇಶಾ, ಯೇಲ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ್ದಾರೆ.