Thursday, August 18, 2022

Latest Posts

ಉದಯಪುರ ಹಿಂದು ಹತ್ಯೆಯ ಹಂತಕರ ಬಂಧನ ಹೇಗಾಯ್ತು ಗೊತ್ತಾ? ಇಲ್ಲಿದೆ ವಿಡಿಯೋ…

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನೂಪುರ್​ ಶರ್ಮಾ ಅವರನ್ನು ಬೆಂಬಲಿಸಿ ಪೋಸ್ಟ್​​ ಹಂಚಿಕೊಂಡ ಕಾರಣಕ್ಕೆ ರಾಜಸ್ಥಾನದ ಕನ್ಹಯ್ಯ ಲಾಲ್​​ ನ ಶಿರಚ್ಛೇದ ಮಾಡಿದ ಹಂತಕರಾದ ಗೌಸ್​ ಮಹಮ್ಮದ್ ಮತ್ತು ರಿಯಾಜ್ ಅಖ್ತರ್​ ನಗರದಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪೊಲೀಸರು ಅವರನ್ನು ಬೆನ್ನಟ್ಟಿ ಹಿಡಿಡಿದ್ದು, ಇದೀಗ ಇದರ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.

ಟೈಲರ್​ ಕನ್ಹಯ್ಯಾ ಲಾಲ್​ರನ್ನು ರಚ್ಛೇದಿಸಿ, ಪ್ರಧಾನಿ ಮೋದಿಯನ್ನೂ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ ವಿಡಿಯೋ ಹರಿಬಿಟ್ಟ ಹಂತಕರು, ಬೈಕ್​ ಮೇಲೆ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ.

ಉದಯಪುರ ಹೊರವಲಯದ ಹೆದ್ದಾರಿಯಲ್ಲಿ ಹೆಲ್ಮೆಟ್​ ಧರಿಸಿ ವೇಗವಾಗಿ ಹೋಗುತ್ತಿದ್ದ ಬೈಕ್​ ಅನ್ನು ಚೆಕ್​ಪೋಸ್ಟ್​ನಲ್ಲಿ ಕಣ್ಗಾವಲು ಕಾಯುತ್ತಿದ್ದ ಪೊಲೀಸರು ತಡೆಯಲು ಮುಂದಾದಾಗ, ನಿಲ್ಲಿಸದೇ ಅತಿವೇಗವಾಗಿ ಹೋಗಿದ್ದಾರೆ. ಈ ವೇಳೆ ಪೊಲೀಸ್​ ತಂಡ ಅವರನ್ನು ಬೆನ್ನಟ್ಟಿ ಹೋಗಿ ಹಿಡಿದಿದ್ದು, ಇದನ್ನು ಯಾರೋ ಮೊಬೈಲ್​ನಲ್ಲಿ ಸೆರೆಹಿಡಿದಿದ್ದಾರೆ.

ಪರಿಹಾರ ಘೋಷಣೆ:
ಹತ್ಯೆಯಾದ ದರ್ಜಿ ಕನ್ಹಯ್ಯಾ ಲಾಲ್​ ಕುಟುಂಬಕ್ಕೆ ರಾಜಸ್ಥಾನ ಸರ್ಕಾರ 31 ಲಕ್ಷ ರೂಪಾಯಿ ಪರಿಹಾರ ಮತ್ತು ಇಬ್ಬರು ಪುತ್ರರಿಗೆ ಸರ್ಕಾರಿ ಉದ್ಯೋಗ ಘೋಷಿಸಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!