ಟ್ವಿಟರ್‌ಗೆ ಮತ್ತೆ ಛಾಟಿ ಬೀಸಿದ ಸರ್ಕಾರ: ಆದೇಶ ಪಾಲನೆಗೆ ಜು.4ರ ಗಡುವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಿಂಗಳ ಆರಂಭದಲ್ಲೇ ನೀಡಿದ ನೋಟೀಸ್‌ಗೂ ಮೌನ ವಹಿಸಿರುವ ಟ್ವಿಟರ್‌ಗೆ ಅಂತಿಮ ನೋಟಿಸ್ ಜಾರಿಗೊಳಿಸಲಾಗಿದ್ದು, ಕೇಂದ್ರ ಸರ್ಕಾರವು ತಾನು ಇದುವರೆಗೆ ಹೊರಡಿಸಿರುವ ಎಲ್ಲಾ ಆದೇಶಗಳನ್ನು ಪೂರ್ಣಗೊಳಿಸಲು ಜು. 4ರ ಗಡುವು ನೀಡಿದೆ.
ಇಲೆಕ್ಟ್ರಾನಿಕ್ಸ್  ಮತ್ತು  ಐಟಿ ಖಾತೆ ವಿಧಿಸಿರುವ ಜು.4ರ ಅಂತಿಮ ಗಡುವಿನೊಳಗೆ ಸರಕಾರಿ ಆದೇಶಗಳಿಗೆ ಬದ್ಧತೆ ಪ್ರಕಟಿಸದಿದ್ದಲ್ಲಿ, ಮಧ್ಯಸ್ಥಿಕೆ ಸ್ಥಾನಮಾನ  ಟ್ವಿಟರ್  ಕೈತಪ್ಪಲಿದೆ.

ಟ್ವಿಟರ್‌ನಲ್ಲಿ ಪೋಸ್ಟ್  ಮಾಡಲಾಗಿರುವ ಎಲ್ಲ ಬಗೆಯ ಕಮೆಂಟ್‌ಗಳಿಗೂ ಟ್ವಿಟರ್ ಸಂಪೂರ್ಣ ಬಾಧ್ಯಸ್ಥನಾಗಲಿದೆ ಎಂದು ಮೂಲಗಳು ತಿಳಿಸಿವೆ. ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾವು ಕಳುಹಿಸಿರುವ ಈ-ಮೇಲ್ ಪ್ರಶ್ನಾವಳಿಗಳಿಗೆ ಟ್ವಿಟರ್ ಪ್ರತಿಕ್ರಿಯಿಸಿಲ್ಲ. ಈ ಹಿಂದೆಯೂ ಸರಕಾರದ ಯಾವುದೇ ಆದೇಶಗಳನ್ನು  ಟ್ವಿಟರ್ ಗೌರವಿಸಿಲ್ಲ, ಬದಲಾಗಿ ನಿರ್ಲಕ್ಷಿಸಿದೆ.

2021ರಲ್ಲಿ  ಸರಕಾರದ ಕೋರಿಕೆ ಮೇರೆಗೆ ಬ್ಲಾಕ್ ಮಾಡಲಾಗಿದ್ದ ಸುಮಾರು ೮೦ಟ್ವಿಟರ್ ಅಕೌಂಟ್‌ಗಳು ಮತ್ತು ಟ್ವೀಟ್‌ಗಳ ಪಟ್ಟಿಯನ್ನು ಮೈಕ್ರೋ ಬ್ಲಾಗಿಂಗ್ ಸೈಟ್  ಟ್ವಿಟರ್‌ಗೆ ಜೂ.26ರಂದು ರವಾನಿಸಿತ್ತು. ಇಂಟರ್‌ನ್ಯಾಷನಲ್ ಅಡ್ವೊಕಸಿ ಗ್ರೂಪ್ ಫ್ರೀಡಂ ಹೌಸ್, ಪತ್ರಕರ್ತರು, ರಾಜಕಾರಣಿಗಳು ಮತ್ತು ರೈತ ಪ್ರತಿಭಟನೆ ಬೆಂಬಲಿಗರ ಕೆಲವು ಟ್ವೀಟ್‌ಗಳನ್ನು ಮತ್ತು ಹಲವು ಅಕೌಂಟ್‌ಗಳನ್ನು ಬ್ಲಾಕ್ ಮಾಡುವಂತೆ ಸರಕಾರ ಕೋರಿತ್ತು. ಟ್ವಿಟರ್ ಈ ಬಗ್ಗೆ ಪ್ರತಿಕ್ರಿಯಿಸಿಲ್ಲ.

ಇದಲ್ಲದೆ ಸರಕಾರ ಹೊರಡಿಸಿರುವ ಹಲವು ಇತರ ಆದೇಶಗಳನ್ನೂ  ಟ್ವಿಟರ್ ಇನ್ನೂ ಪಾಲಿಸಿಲ್ಲ ,ಹಾಗಾಗಿ ಜೂ.27ರಂದು ಸಂಸ್ಥೆಗೆ ಅಂತಿಮ ನೋಟೀಸ್ ನೀಡುವುದು ಅನಿವಾರ್ಯವಾಯ್ತೆಂದು ಸರಕಾರಿ ಮೂಲಗಳು ಪ್ರೆಸ್ ಟ್ರಸ್ಟ್  ಆಫ್ ಇಂಡಿಯಾಗೆ ತಿಳಿಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!