ಹೊಸದಿಗಂತ ಡಿಜಿಟಲ್ ಡೆಸ್ಕ್
ಪಾಕಿಸ್ತಾನವು ತನ್ನ ವಿವಿಧ ಜೈಲುಗಳಲ್ಲಿ 682 ಭಾರತೀಯರ ಖೈದಿಗಳಿರುವ ವಿಚಾರವನ್ನು ದೃಢಪಡಿಸಿದೆ.
2008 ರ ಕಾನ್ಸುಲರ್ ಪ್ರವೇಶದ ಒಪ್ಪಂದದಂತೆ ಜುಲೈ 1 ರಂದು ಭಾರತ- ಪಾಕ್ ಅಧಿಕಾರಿಗಳು ತಮ್ಮ ವಶದಲ್ಲಿರುವ ನಾಗರಿಕ ಕೈದಿಗಳು ಮತ್ತು ಮೀನುಗಾರರ ಪಟ್ಟಿಯನ್ನು ವಿನಿಮಯ ಮಾಡಿಕೊಂಡಿದ್ದಾರೆ.
ಈ ಪಟ್ಟಿಗಳನ್ನು ಜನವರಿ 1 ಮತ್ತು ಜುಲೈ 1 ರಂದು ವರ್ಷಕ್ಕೆ ಎರಡು ಬಾರಿ ವಿನಿಮಯ ಮಾಡಲಾಗುತ್ತದೆ. 49 ನಾಗರಿಕರು ಮತ್ತು 633 ಮೀನುಗಾರರು ಸೇರಿದಂತೆ ಪಾಕ್ ನಲ್ಲಿ ಬಂಧಿತರಾಗಿರುವ 682 ಭಾರತೀಯ ಖೈದಿಗಳ ಪಟ್ಟಿಯನ್ನು ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್‌ನೊಂದಿಗೆ ಪಾಕಿಸ್ತಾನ ಹಂಚಿಕೊಂಡಿದೆ.
ಅದರಂತೆ 345 ನಾಗರಿಕರು ಮತ್ತು 116 ಮೀನುಗಾರರು ಸೇರಿದಂತೆ ಭಾರತದಲ್ಲಿರುವ 461 ಪಾಕಿಸ್ತಾನಿ ಕೈದಿಗಳ ಪಟ್ಟಿಯನ್ನು ಭಾರತ ಹಂಚಿಕೊಂಡಿದೆ.
ಜೈಲು ಶಿಕ್ಷೆಯನ್ನು ಪೂರ್ಣಗೊಳಿಸಿದ 536 ಭಾರತೀಯ ಮೀನುಗಾರರು ಮತ್ತು ಮೂವರು ನಾಗರಿಕ ಕೈದಿಗಳನ್ನು ಬಿಡುಗಡೆ ಮಾಡಿ ಸ್ವದೇಶಕ್ಕೆ ಕಳುಹಿಸುವಂತೆ ಭಾರತವು ಪಾಕಿಸ್ತಾನಕ್ಕೆ ಕರೆ ನೀಡಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ